
ಕೋವಿಡ್-19 ಸೋಂಕು ದಿನೇ ದಿನೇ ಏರಿಕೆ ಕಂಡು ಆತಂಕ ಮೂಡಿಸುತ್ತಿದ್ದು, ಸಾರ್ವಜನಿಕರಿಗೆ ಅಗತ್ಯವಿರುವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮನವಿ ಮಾಡಿಕೊಳ್ಳುತ್ತಲೇ ಇವೆ.
ದೇಶವೆಲ್ಲಾ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಎಂದು ಮಾತನಾಡುತ್ತಿದ್ದರೆ, ಬಾಲಿವುಡ್ ನಟ ಟೈಗರ್ ಶ್ರಾಫ್ ತಮ್ಮ ನಟನೆಯ ಹೀರೋಪಂತಿ 2 ಚಿತ್ರದ ಶೂಟಿಂಗ್ ವೇಳೆಯ ಫೋಟೋವೊಂದನ್ನು ಶೇರ್ ಮಾಡಿದ್ದು ಅದೀಗ ವಿವಾದಕ್ಕೆ ಸಿಲುಕಿದೆ. ಫೋಟೋದಲ್ಲಿ ಟೈಗರ್ ಅವರು ಮಾಸ್ಕ್ ಹಾಕದೇ ಇರುವುದು ಅಭಿಮಾನಿಗಳ ಪ್ರಶ್ನೆಗೆ ಗ್ರಾಸವಾಗಿದೆ.
ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಗುಡ್ ನ್ಯೂಸ್: RTE ಅರ್ಜಿ ಸಲ್ಲಿಕೆ ವಿಸ್ತರಣೆ
ಅದರಲ್ಲೂ ಚಿತ್ರದಲ್ಲಿ ಶ್ರಾಫ್ ಸುತ್ತ ಇರುವ ಮಂದಿ ಎಲ್ಲಾ ಮಾಸ್ಕ್ ಹಾಕಿರುವಾಗ ಅವರೇಕೆ ಮಾಸ್ಕ್ ಹಾಕಿಲ್ಲ ಎಂಬ ಪ್ರಶ್ನೆ ಇನ್ನಷ್ಟು ಪಂಚಿಂಗ್ ಆಗಿದೆ.
ಸಾಮಾನ್ಯ ಜನರಿಗೆ ಒಂದು ನ್ಯಾಯ. ಹೀರೋಗಳಿಗೆ ಒಂದು ನ್ಯಾಯವೇ ಎಂದು ನೆಟ್ಟಿಗರು ಈ ಚಿತ್ರವನ್ನು ಕಂಡು ಟ್ವೀಟ್‌ಗಳ ಮೂಲಕ ಸಖತ್ತಾಗಿ ಟೈಗರ್‌ರನ್ನು ಬೆಂಡೆತ್ತಿದ್ದಾರೆ.