ಹಿರಿಯ ನಟ ರಾಜೀವ್ ಕಪೂರ್ ಫೆಬ್ರವರಿ 9ರಂದು ನಿಧನರಾಗಿದ್ದಾರೆ. ಭಾರೀ ಹೃದಯಸ್ಥಂಭನಕ್ಕೆ ಒಳಗಾದ 58 ವರ್ಷದ ರಾಜೀವ್‌ರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳಿದಿದ್ದರು.
ನಟನ ಅಗಲಿಕೆಗೆ ಬಾಲಿವುಡ್ ಕಂಬನಿ ಮಿಡಿದಿದೆ. ಇದೇ ವೇಳೆ ಅಗಲಿದ ನಟನ ಥ್ರೋಬ್ಯಾಕ್ ಚಿತ್ರಗಳನ್ನು ಅಭಿಮಾನಿಗಳು ಶೇರ್ ಮಾಡಿಕೊಂಡಿದ್ದಾರೆ. ಸಿಮಿ ಘರ್ವಾಲ್‌ರ ಚಾಟ್ ಶೋ ಒಂದರಲ್ಲಿ ರಿಶಿ ಹಾಗೂ ರಾಜೀವ್ ಕಪೂರ್ ಸಹೋದರರು ಭಾಗವಹಿಸಿದ್ದ ವಿಡಿಯೋವೊಂದನ್ನು ಶೇರ್ ಮಾಡಲಾಗಿದೆ. ಈ ಶೋನಲ್ಲಿ ಕಪೂರ್ ಸಹೋದರರು ತಮ್ಮ ವೈಯಕ್ತಿಕ ಹಾಗೂ ವೃತ್ತಿ ಜೀವನಗಳ ಬಗ್ಗೆ ಮಾತನಾಡಿದ್ದಾರೆ.
ನಟಿ ಕಾಜಲ್ ಅಗರ್ವಾಲ್ಗೆ ಅಸ್ತಮಾ..! ಇಲ್ಲಿದೆ ನೋಡಿ ಅಸ್ತಮಾ ಕುರಿತ ಬಹುಮುಖ್ಯ ಮಾಹಿತಿ
“ಅತ್ಯಂತ ಕಿರಿಯನಾದ ಕಾರಣ ನನ್ನ ಮೇಲೆ ಅಗಾಧವಾದ ಪ್ರೀತಿ ಇತ್ತು, ಆದರೆ ಫುಟ್ಬಾಲ್‌ನಂತೆ ನನ್ನನ್ನು ಎಲ್ಲಾ ಕಡೆ ಎಳೆದಾಡುತ್ತಿದ್ದರು. ನೀವು ಅತ್ಯಂತ ಕಿರಿಯರಾದ ಮೇಲೆ ನೀವು ಎಲ್ಲರ ಮಾತನ್ನು ಕೇಳಬೇಕು ಹಾಗೂ ಕೊನೆಯದಾಗಿ ಎಲ್ಲದಕ್ಕೂ ನಿಮ್ಮ ಮೇಲೆಯೇ ಆಪಾದನೆ ಮೂಡಿ ಬರುತ್ತದೆ” ಎಂದಿದ್ದರು ರಾಜೀವ್.
ವೃತ್ತಿ ಜೀವನದ ರೈವಲರಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ರಾಜೀವ್, “ಇಲ್ಲ, ಅಲ್ಲಿ ಯಾವುದೇ ವೈರತ್ವ ಇರಲಿಲ್ಲ, ಏಕೆಂದರೆ ಅಲ್ಲಿದ್ದದ್ದು ಕೇವಲ ಪ್ರೀತಿ, ಕಾಳಜಿ ಹಾಗೂ ನನ್ನ ಹೆತ್ತವರು ಬೆಳೆಸಿದ ರೀತಿ. ನನ್ನ ಸಹೋದರರು ನನ್ನ ಅತಿ ದೊಡ್ಡ ಬೆಂಬಲ. ನನಗೆ ಬೇಕಾದ ಎಲ್ಲವನ್ನೂ ಅವರು ಕೊಟ್ಟಿದ್ದು, ಯಾವುದಕ್ಕೂ ಕೊರತೆ ಮಾಡಿಲ್ಲ” ಎಂದಿದ್ದಾರೆ.