ಚಿತ್ತೂರು: ಜನಸೇನಾ ಮುಖ್ಯಸ್ಥ, ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ಹುಟ್ಟುಹಬ್ಬದ ದಿನವೇ ದುರಂತ ಸಂಭವಿಸಿದೆ.
ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಪೋಸ್ಟರ್ ಹಚ್ಚಲು ಹೋಗಿದ್ದ ಮೂವರು ಅಭಿಮಾನಿಗಳು ಸಾವನ್ನಪ್ಪಿದ್ದಾರೆ. ಚಿತ್ತೂರು ಜಿಲ್ಲೆ ಶಾಂತಿಪುರ ಮಂಡಲದ ಕಲಮಲದೊಡ್ಡಿಯಲ್ಲಿ ಘಟನೆ ನಡೆದಿದೆ.
ಕರ್ಲಘಟ್ಟ ಗ್ರಾಮದಲ್ಲಿ ಪವನ್ ಕಲ್ಯಾಣ್ ಹುಟ್ಟುಹಬ್ಬಕ್ಕೆ ಶುಭಕೋರಿ ಪೋಸ್ಟರ್ ಹಚ್ಚುವ ವೇಳೆಯಲ್ಲಿ ವಿದ್ಯುತ್ ತಂತಿ ತಗುಲಿದ ಪರಿಣಾಮ ವಿದ್ಯುತ್ ಪ್ರವಹಿಸಿ ಮೂವರು ಅಭಿಮಾನಿಗಳು ಮೃತಪಟ್ಟಿದ್ದಾರೆ. ಸೋಮಶೇಖರ್, ರಾಜೇಂದ್ರ, ಅರುಣಾಚಲಂ ಮೃತಪಟ್ಟ ಅಭಿಮಾನಿಗಳು.
ಇವತ್ತು ಪವನ್ ಕಲ್ಯಾಣ್ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಪೋಸ್ಟರ್ ಹಾಕಲು ಹೋಗಿದ್ದ ವೇಳೆ ಅವಘಡ ಸಂಭವಿಸಿದೆ.