
ನೀವು ಬೆಕ್ಕುಗಳ ಪ್ರಿಯರಾಗಿದ್ದು ಅವುಗಳ ತುಂಟಾಟಗಳು ಹಾಗೂ ಚೇಷ್ಟೆಗಳನ್ನು ನೋಡಿ ಖುಷಿ ಪಡುವವರಾಗಿದ್ದರೆ, ಇಲ್ಲೊಂದು ಸಖತ್ ವಿಡಿಯೋ ಬರಲಿದೆ ನೋಡಿ.
ಪಿಟ್ಸ್‌ಬರ್ಗ್‌ನ ರೋ ಹೌಸ್ ಸಿನಿಮಾದ ಸ್ಥಾಪಕ ಬ್ರಯಾನ್ ಮೆಂಡೆಲ್‌ಶೋನ್, ಕ್ವಾರಂಟೈನ್ ಕ್ಯಾಟ್ ಫಿಲಂ ಎಂಬ ಕಾರ್ಯಕ್ರಮವನ್ನು ಜೂನ್ 19ರಂದು ಆಯೋಜಿಸಲಿದ್ದಾರೆ. ಜಗತ್ತಿನಾದ್ಯಂತ 130 ಬೆಕ್ಕುಗಳ ವಿಶೇಷ ದೃಶ್ಯಾವಳಿಗಳುಳ್ಳ 75 ನಿಮಿಷಗಳ ವಿಡಿಯೋವೊಂದನ್ನು ಇದೇ ವೇಳೆ ಬಿಡುಗಡೆ ಮಾಡಲಾಗುವುದು.
ಲಾಕ್ ಡೌನ್ ಕಾಲಾವಧಿಯಲ್ಲಿ ಆರ್ಥಿಕ ನಷ್ಟ ಅನುಭವಿಸುತ್ತಿರುವ ಚಿತ್ರಮಂದಿರಗಳಿಗೆ ಚೈತನ್ಯ ತುಂಬಲು ಇಂಥದ್ದೊಂದು ಕಾರ್ಯಕ್ರಮ ಆಯೋಜಿಸುತ್ತಿರುವುದಾಗಿ ತಿಳಿದುಬಂದಿದೆ.