ಬಾಲಿವುಡ್ ನಟ ವರುಣ್ ಧವನ್ ಹಾಗೂ ಅವರ ಗೆಳತಿ ನತಾಶಾ ದಲಾಲ್ ವೈವಾಹಿಕ ಜೀವನಕ್ಕೆ ಕಾಲಿಡೋಕೆ ಇನ್ನೇನು ದಿನಗಣನೆ ಶುರುವಾಗಿದೆ. ಅಲಿಭಾಗ್ನಲ್ಲಿ ಈ ಜೋಡಿ ಜನವರಿ 24ರಂದು ಅದ್ಧೂರಿಯಾಗಿ ಮದುವೆಯಾಗಲಿದ್ದಾರೆ.
ಅಲಿಬಾಗ್ನ ದ ಮ್ಯಾನ್ಶನ್ ಹೌಸ್ನಲ್ಲಿ ವರುಣ್ ಹಾಗೂ ನತಾಶಾ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಈಗಾಗಲೇ ವರುಣ್ ಧವನ್ ಕುಟುಂಬಸ್ಥರು ಮ್ಯಾನ್ಶನ್ ಹೌಸ್ಗೆ ತೆರಳಿದ್ದಾರೆ.
ಅಲಿಬಾಗ್ನ ಈ ಮ್ಯಾನ್ಶನ್ ಹೌಸ್ ಅತ್ಯಂತ ಸುಂದರವಾದ ಪ್ರಕೃತಿ ಸೌಂದರ್ಯವನ್ನ ಹೊಂದಿರುವ ಕಟ್ಟಡವಾಗಿದೆ. ಸುತ್ತಲೂ ತೆಂಗಿನಮರಗಳನ್ನ ಹೊಂದಿರುವ ಈ ಸ್ಥಳ ಅತ್ಯಂತ ಪ್ರಶಾಂತವಾಗಿದೆ. ಇದು ಸಸವಾನೆ ಬೀಚ್ಗೆ ಸಮೀಪದಲ್ಲಿದೆ.
ಈ ಮ್ಯಾನ್ಶನ್ ಹೌಸ್ನಲ್ಲಿ 25 ಐಶಾರಾಮಿ ಕೊಠಡಿಗಳಿವೆ. ಪ್ರತಿಯೊಂದು ಕೊಠಡಿಗೂ 375-450 ಸ್ಕ್ವೇರ್ ಫೀಟ್ ವಿಸ್ತೀರ್ಣ ಹೊಂದಿದೆ. ಪ್ರತಿಯೊಂದು ಕೊಠಡಿಯನ್ನೂ ಆಕಾಶದ ಸುಂದರ ಚಿತ್ರಣ ಕಾಣುವಂತೆ ವಿನ್ಯಾಸ ಮಾಡಲಾಗಿದೆ. ಪ್ರತಿ ಕೊಠಡಿಯ ಸ್ನಾನಗೃಹದಲ್ಲಿ ಮಾಸ್ಕೋಟ್ ಟೆಡ್ಡಿ ಬಿಯರ್ ಗೊಂಬೆ ಇಡಲಾಗಿದೆ.
ಮ್ಯಾನ್ಶನ್ ಹೌಸ್ನಲ್ಲಿ ಮುಂಬೈನಿಂದ 20 ನಿಮಿಷಗಳ ಸ್ಪೇಸ್ ಬೋಟ್ ರೈಡ್ ವ್ಯವಸ್ಥೆ ಇದೆ. ಇಷ್ಟೆಲ್ಲ ವ್ಯವಸ್ಥೆ ಹೊಂದಿರುವ ಈ ಐಶಾರಾಮಿ ಕಟ್ಟಡದ ಬಾಡಿಗೆ ಎಷ್ಟಿರಬಹುದು ಎಂದು ಯೋಚನೆ ಮಾಡ್ತಿದ್ದೀರಾ? ಈ ಸಂಪೂರ್ಣ ಆಸ್ತಿಯನ್ನ ಒಂದು ದಿನಕ್ಕೆ ಬಾಡಿಗೆ ಪಡೆಯಬೇಕು ಅಂದರೆ ನೀವು 4 ಲಕ್ಷ ರೂಪಾಯಿ ಪಾವತಿ ಮಾಡಬೇಕು.
https://www.instagram.com/p/B23G-pwFAuL/?utm_source=ig_web_copy_link
https://www.instagram.com/p/B8zAcbvpfxp/?utm_source=ig_web_copy_link
https://www.instagram.com/p/CF87ewAJaZM/?utm_source=ig_web_copy_link