ಮುಂಬೈ: ಬಾಲಿವುಡ್ ಉದಯೋನ್ಮುಖ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡ ದಿನ ಏನು ಮಾಡಿದ್ದರು…? ಅವರ ದಿನಚರಿ ಹೇಗಿತ್ತು ಎಂಬುದು ಈಗ ಬಹಿರಂಗವಾಗಿದೆ.
ಭಾನುವಾರ ಮುಂಜಾನೆ 6.30ಕ್ಕೆ ಎಚ್ಚರಗೊಂಡ ಸುಶಾಂತ್, ಅಡುಗೆಯವರಿಂದ ದಾಳಿಂಬೆ ಜ್ಯೂಸ್ ಮಾಡಿಸಿಕೊಂಡು ಕುಡಿದಿದ್ದಾರೆ. ಬಳಿಕ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ. ಇದಾಗಿ ಒಂದು ಗಂಟೆ ಬಳಿಕ ಮನೆಯ ಕೆಲಸಗಾರರು ಸುಶಾಂತ್ ಕೊಠಡಿಯ ಬಾಗಿಲು ಬಡಿದು ಉಪಾಹಾರ ಹಾಗೂ ಊಟಕ್ಕೆ ಏನು ಅಡುಗೆ ಮಾಡಬೇಕು ಎಂದು ಕೇಳಿದ್ದಾರೆ. ಆದರೆ, ಅಲ್ಲಿಂದ ಏನೂ ಉತ್ತರ ಬಾರದಿದ್ದರಿಂದ ಗಾಬರಿಗೊಂಡು ಪಕ್ಕದ ಮನೆಯವರ ಗಮನಕ್ಕೆ ತರುತ್ತಾರೆ.
ಪಕ್ಕದ ಮನೆಯವರು ಬಳಿಕ ಸುಶಾಂತ್ ಸಹೋದರಿಗೆ ಕರೆ ಮಾಡಿ ವಿಷಯ ತಿಳಿಸುತ್ತಾರೆ. ಅವರೆಲ್ಲ ಬಂದ ಬಳಿಕ ಕೊಠಡಿ ಬಾಗಿಲು ಒಡೆದು ನೋಡಿದರೆ ಸುಶಾಂತ್ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿ ಅಕ್ಕಪಕ್ಕದ ಮನೆಯವರನ್ನು ವಿಚಾರಿಸುತ್ತಿದ್ದಾರೆ.