![](https://kannadadunia.com/wp-content/uploads/2020/11/WhatsApp-Image-2020-11-13-at-2.56.24-PM-1024x688.jpeg)
1990ರಲ್ಲಿ ರಿಲೀಸ್ ಆಗಿ ಬ್ಲಾಕ್ ಬಸ್ಟರ್ ಹಿಟ್ ಕಂಡ ಸಿನಿಮಾ ಕುಚ್ ಕುಚ್ ಹೋತಾ ಹೈ ಸಿನಿಮಾದ ಸೀನ್ನ್ನ ವೀನಾ ಫ್ಯಾನ್ ಎಂಬ ಯುಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಲಾಗಿದೆ.
5 ನಿಮಿಷಗಳ ಈ ಮರುಸೃಷ್ಟಿಯ ವಿಡಿಯೋ ಮೂಲ ಸಿನಿಮಾದ ದೃಶ್ಯವನ್ನ ಬಹುತೇಕ ಹೋಲುತ್ತಿದೆ. ಅಲ್ಲದೇ ಕುಚ್ ಕುಚ್ ಹೋತಾ ಹೈ ಸಿನಿಮಾದ ದೃಶಾವಳಿಯಲ್ಲಿ ಶಾರುಖ್ ಹಾಗೂ ಕಾಜೊಲ್ ಧರಿಸಿದ್ದ ಡ್ರೆಸ್ಗಳನ್ನ ಹೋಲುವ ಉಡುಪನ್ನೇ ಧರಿಸಲಾಗಿದೆ. ಈ ವಿಡಿಯೋವನ್ನ ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡುತ್ತಿದ್ದಂತೆ ಭಾರತ ಹಾಗೂ ಇಂಡೋನೇಷಿಯಾದ ಬಾಲಿವುಡ್ ಸಿನಿಮಾದ ಅಭಿಮಾನಿಗಳು ಕಮೆಂಟ್ ಬಾಕ್ಸ್ನಲ್ಲಿ ಪ್ರಶಂಸೆಗಳ ಸುರಿಮಳೆಯನ್ನೇ ಹರಿಸಿದ್ದಾರೆ.