![](https://kannadadunia.com/wp-content/uploads/2020/10/3f59de95-9c7f-48d4-8345-042d22138a40-1.jpg)
ಹಾಲಿವುಡ್ ನಟ ಪಾಲ್ ರಡ್ ನಟನೆಯ ಜೊತೆ ಜೊತೆಗೇ ಯಾವಾಗಲು ತಮ್ಮ ಸಾಮಾಜಿಕ ಕಾರ್ಯಗಳಿಂದ ಜನರನ್ನ ಮನಸ್ಸನ್ನ ಗೆಲ್ಲುತ್ತಲೇ ಬಂದಿದ್ದಾರೆ. ಈ ಬಾರಿ ಕೂಡ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತದಾನದ ವೇಳೆ ಈ ನಟ ಹೃದಯಸ್ಪರ್ಶಿ ಕಾರ್ಯ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿದ್ದಾರೆ.
ಅಮೆರಿಕ ಚುನಾವಣೆಗೆ ಮತ ಚಲಾಯಿಸಬೇಕಾದ ಹಿನ್ನೆಲೆ ನ್ಯೂಯಾರ್ಕ್ನ ಮತದಾರರು ಭಾರೀ ಮಳೆ ನಡುವೆಯೂ ಸಾಲಿನಲ್ಲಿ ನಿಂತಿದ್ದರು. ಈ ವೇಳೆ ಮತದಾನ ನಡೆಯುತ್ತಿದ್ದ ಸ್ಥಳಕ್ಕೆ ಬಂದ ನಟ ಪಾಲ್ ಮತದಾರರಿಗೆ ಬ್ಲೂ ಬೆರಿ ಹಾಗೂ ಕ್ರೀಮ್ ಕುಕ್ಕೀಸ್ಗಳನ್ನ ತಿನ್ನಲು ನೀಡಿದ್ದಾರೆ.
ತಮ್ಮ ಈ ಕಾರ್ಯದ ಬಗ್ಗೆ ಟ್ವಿಟರ್ನಲ್ಲಿ ಹೇಳಿಕೊಂಡಿರುವ ಪಾಲ್ ಮನೆಯಿಂದ ಹೊರಬಂದು ಮಳೆಯ ನಡುವೆಯೂ ಮತ ಚಲಾಯಿಸಿದ ನಿಮಗೆಲ್ಲ ಧನ್ಯವಾದ ಹೇಳಲು ಬಯಸುತ್ತೇನೆ ಅಂತಾ ಬರೆದುಕೊಂಡಿದ್ದಾರೆ. ಹಾಲಿವುಡ್ ನಟನ ಈ ಕಾರ್ಯ ಟ್ವೀಟೀಗರ ಹೃದಯ ಗೆದ್ದಿದೆ.