alex Certify ಸುಶಾಂತ್​ ನೆನಪಿನಲ್ಲಿ ಭಾವನಾತ್ಮಕ ಪೋಸ್ಟ್​ ಶೇರ್​ ಮಾಡಿದ ರಿಯಾ ಚಕ್ರವರ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಶಾಂತ್​ ನೆನಪಿನಲ್ಲಿ ಭಾವನಾತ್ಮಕ ಪೋಸ್ಟ್​ ಶೇರ್​ ಮಾಡಿದ ರಿಯಾ ಚಕ್ರವರ್ತಿ

ಬಾಲಿವುಡ್​ ನಟ ಸುಶಾಂತ್​ ಸಿಂಗ್​ ಸಾವಿಗೀಡಾಗಿ ಒಂದು ವರ್ಷ ಕಳೆದಿದೆ. ಈ ದಿನದಂದು ನಟಿ ರಿಯಾ ಚಕ್ರವರ್ತಿ ಸುಶಾಂತ್​ ಸಿಂಗ್​ರನ್ನ ನೆನೆದು ಭಾವನಾತ್ಮಕ ಪೋಸ್ಟ್​ ಒಂದನ್ನ ಶೇರ್​ ಮಾಡಿದ್ದಾರೆ. ಸುಶಾಂತ್​ ಮೃತರಾಗುವುದಕ್ಕೂ ಮುನ್ನ ನಟಿ ರಿಯಾ ಚಕ್ರವರ್ತಿ ಜೊತೆ ಡೇಟಿಂಗ್​ನಲ್ಲಿದ್ದರು ಎನ್ನಲಾಗಿತ್ತು.

ಸುಶಾಂತ್​​ರನ್ನ ನೆನೆದು ಇನ್​ಸ್ಟಾದಲ್ಲಿ ಪೋಸ್ಟ್​ ಶೇರ್​ ಮಾಡಿರುವ ನಟಿ ರಿಯಾ, ನೀನು ನನ್ನೊಂದಿಗೆ ಇಲ್ಲ ಅನ್ನೋದನ್ನ ನಾನು ಒಂದು ಕ್ಷಣಕ್ಕೂ ನಂಬಿಲ್ಲ. ಸಮಯ ಎಲ್ಲವನ್ನೂ ಗುಣಪಡಿಸುತ್ತೆ ಎಂದು ಹೇಳುತ್ತಾರೆ. ಆದರೆ ನೀನೇ ನನ್ನ ಸಮಯ ಹಾಗೂ ಎಲ್ಲದೂ ಆಗಿದ್ದೀಯಾ. ನೀನಿಗ ನನ್ನನ್ನ ರಕ್ಷಣೆ ಮಾಡುವ ಏಂಜೆಲ್​ ಆಗಿದ್ದೀಯಾ ಅನ್ನೋದು ನನಗೆ ತಿಳಿದಿದೆ. ಚಂದ್ರನ ಅಂಗಳದಲ್ಲಿ ಕೂತು ಟೆಲಿಸ್ಕೋಪ್​​ನ ಸಹಾಯದಿಂದ ನನ್ನನ್ನ ನೋಡುತ್ತಿರಬಹುದು. ನಿನಗಾಗಿ ನಾನು ಪ್ರತಿದಿನ ಕಾಯುತ್ತೇನೆ. ನಿನಗಾಗಿ ಎಲ್ಲ ಕಡೆ ಹುಡುಕಾಡುತ್ತೇನೆ. ನನಗೊತ್ತು ನೀನಿಲ್ಲಿ ನನ್ನ ಜೊತೆಯೇ ಇದ್ದೀಯಾ.

ನೀನಿಲ್ಲದೇ ನನಗೆ ಜೀವನವೇ ಇಲ್ಲ. ನನ್ನ ಜೀವನದ ಅರ್ಥವನ್ನ ನೀನೇ ತೆಗೆದುಕೊಂಡಿದ್ದೀಯಾ. ಈ ಖಾಲಿತನವನ್ನ ನಿನ್ನೊಬ್ಬನ್ನ ಹೊರತುಪಡಿಸಿ ಇನ್ಯಾರಿಂದಲೂ ತುಂಬಲು ಸಾಧ್ಯವಿಲ್ಲ. ನಿನಗೆ ಪ್ರತಿದಿನ ಮಾಲ್ಪುವಾ ( ಖಾದ್ಯದ ಹೆಸರು) ಮಾಡಿಕೊಡುತ್ತೇನೆ ಎಂದು ಪ್ರತಿಜ್ಞೆ ಮಾಡುತ್ತೇನೆ. ಅಲ್ಲದೇ ಈ ಜಗತ್ತಿನಲ್ಲಿರುವ ಎಲ್ಲಾ ಕ್ವಾಂಟಮ್​ ಫಿಸಿಕ್ಸ್​ ಪುಸ್ತಕವನ್ನ ಓದುತ್ತೇನೆ. ದಯಮಾಡಿ ವಾಪಸ್​ ಬಾ​​ ಎಂದು ಬರೆದುಕೊಂಡಿದ್ದಾರೆ. #mywholeheart ಎಂಬ ಹ್ಯಾಶ್​ಟ್ಯಾಗ್​ನ ಅಡಿಯಲ್ಲಿ ಈ ಪೋಸ್ಟ್​ ಶೇರ್​ ಮಾಡಿದ್ದಾರೆ.

ಮುಂಬೈನ ತಮ್ಮ ನಿವಾಸದಲ್ಲಿ ಕಳೆದ ವರ್ಷ ಜೂನ್​ 14ರಂದು ಸುಶಾಂತ್​ ಸಿಂಗ್​ ರಜಪೂತ್​ರ ಮೃತದೇಹ​ ನೇಣಿಗೆ ಶರಣಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಪ್ರಕರಣವನ್ನ ಸಿಬಿಐ ಕೈಗೆತ್ತಿಕೊಂಡಿದ್ದು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ. ಈಗಾಲೇ ರಿಯಾ ಚಕ್ರವರ್ತಿ ಹಾಗೂ ಆಕೆಯ ಕುಟುಂಬ ಮತ್ತು ಸುಶಾಂತ್​ರ ಕೆಲ ಸಿಬ್ಬಂದಿಯನ್ನ ವಿಚಾರಣೆಗೆ ಒಳಪಡಿಸಲಾಗಿದೆ. ಅಲ್ಲದೇ ರಿಯಾ ಹಾಗೂ ಆಕೆಯ ಸಹೋದರ ಮಾದಕ ದ್ರವ್ಯಗಳ ತನಿಖೆ ಅಡಿಯಲ್ಲಿ ಎನ್​ಸಿಬಿ ಬಂಧಿಸಿತ್ತು. ಇವರಿಬ್ಬರೂ ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ.

https://www.instagram.com/p/CQGK6hgHldL/?utm_source=ig_web_copy_link

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...