1990ರ ದಶಕದಲ್ಲಿ ಬಾಲ್ಯ ಕಳೆದ ದೇಶವಾಸಿಗಳು ಎಂದೂ ಮರೆಯಲಾಗದ ’ಮಾಲ್ಗುಡಿ ಡೇಸ್’ ಹೆಸರು ಯಾರಿಗೆ ತಾನೇ ಗೊತ್ತಿಲ್ಲ..? ಆಗುಂಬೆಯ ಸುತ್ತ ಮುತ್ತ ಚಿತ್ರೀಕರಿಸಲಾದ ಈ ಸರಣಿಯು ಆರ್.ಕೆ. ನಾರಾಯಣ್ ರ ಸಣ್ಣಪುಟ್ಟ ಕಥೆಗಳ ಸಂಗ್ರಹವನ್ನು ಆಧರಿಸಿದ್ದಾಗಿದೆ.
ಪ್ರಖ್ಯಾತ ಬರಹಗಾರರ 114ನೇ ಜನ್ಮದಿನವಾದ ಶನಿವಾರ ’ಮಾಲ್ಗುಡಿ ಡೇಸ್’ ಬಗ್ಗೆ ರಸಪ್ರಶ್ನೆ ಕಾರ್ಯಕ್ರಮವೊಂದನ್ನು ಇಟ್ಟುಕೊಳ್ಳಲಾಗಿತ್ತು. ಕಥಾ ಸರಣಿಯ ಬಗ್ಗೆ ಅನೆಕ ಆಸಕ್ತಿಕರ ಪ್ರಶ್ನೆಗಳನ್ನು ಕೇಳಲಾಗಿದ್ದು, ಈ ಪ್ರಶ್ನೆಗಳ ಸ್ಕ್ರೀನ್‌ಶಾಟ್ ಇಲ್ಲಿದೆ ನೋಡಿ.
ಬೆಂಗಳೂರಿನ ಮಲ್ಲೇಶ್ವರ ಹಾಗೂ ಬಸವನಗುಡಿಗಳ ಹೆಸರುಗಳ ಸಮಾಗಮದಿಂದ ಈ ಕಥಾ ಸರಣಿಗೆ ʼಮಾಲ್ಗುಡಿ ಡೇಸ್ʼ ಎಂಬ ಹೆಸರು ಬಂದಿದೆ ಎನ್ನಲಾಗಿದೆ. ಇನ್ನಷ್ಟು ಕುತೂಹಲಕಾರಿ ವಿಷಯಗಳನ್ನು ತಿಳಿಯಲು ಈ ರಸಪ್ರಶ್ನೆಯನ್ನು ನೀವೂ ಒಮ್ಮೆ ನೋಡಿ.