ಮನೋಜ್ ಬಾಜ್ಪೇಯಿ ಜೊತೆಗೆ ’ದಿ ಫ್ಯಾಮಿಲಿ ಮ್ಯಾನ್’ ಶೋ ಸೀರೀಸ್‌ನಲ್ಲಿ ತಮ್ಮ ನಟನೆ ಮೂಲಕ ವೀಕ್ಷಕರ ಗಮನ ಸೆಳೆಯುತ್ತಿರುವ ಪ್ರಿಯಾಮಣಿ, ಶಾರುಕ್ ಖಾನ್ ಜೊತೆಗೆ ’ಚೆನ್ನೈ ಎಕ್ಸ್‌ಪ್ರೆಸ್’ ಚಿತ್ರದ ಹಾಡೊಂದರಲ್ಲಿ ನಟಿಸಿದ ಅನುಭವ ಹಂಚಿಕೊಂಡಿದ್ದಾರೆ.
ತಮ್ಮ ಹೊಸ ಫೋಟೋಗಳನ್ನು ಹಂಚಿಕೊಂಡ ನಟಿ ಶುಭ್ರ ಅಯ್ಯಪ್ಪ
ಭಾರೀ ಹಿಟ್ ಆದ ಈ ಹಾಡಿನ ಚಿತ್ರೀಕರಣದ ನೆನಪುಗಳನ್ನು ಹಂಚಿಕೊಂಡ ಪ್ರಿಯಾಮಣಿ, ಶಾರುಕ್ ತಮಗೆ 300 ರೂಪಾಯಿ ಕೊಟ್ಟ ವಿಷಯ ಹೇಳಿಕೊಂಡಿದ್ದಾರೆ.
ಹುಟ್ಟುಹಬ್ಬದ ಸಂಭ್ರಮದಲ್ಲಿ ಬಹುಭಾಷಾ ನಟಿ ಸಿಂಧು ಮೆನನ್
“ಶೂಟಿಂಗ್‌ನ ಮೊದಲ ದಿನದಿಂದಲೇ ಅವರು ನನಗೆ ಆರಾಮಾಗಿ ಜೊತೆಯಲ್ಲಿ ನಟಿಸುವಂತೆ ಮಾಡಿದರು. ಶೂಟಿಂಗ್ ಆರಂಭಿಸುವ ಒಂದು ದಿನದ ಮುನ್ನ ನಾನು ಸ್ಪಾಟ್ ತಲುಪಿದ್ದೆ. ಅಂದಿನಿಂದ ಶೂಟಿಂಗ್ ಮುಗಿಯುವವರೆಗೂ ಅವರು ಬಹಳ ಚೆನ್ನಾಗಿ ನಡೆದುಕೊಂಡಿದ್ದಾರೆ.
ಅವರು ನಮ್ಮೆಲ್ಲರನ್ನೂ ಚೆನ್ನಾಗಿ ನೋಡಿಕೊಂಡಿದ್ದಾರೆ. ಎಷ್ಟರಮಟ್ಟಿಗೆ ಎಂದರೆ, ಅವರ ಐಪ್ಯಾಡ್‌ನಲ್ಲಿ ನಾವು ’ಕೌನ್ ಬನೇಗಾ ಕ್ರೋರ್‌ಪತಿ’ ಆಡಿದ್ದೆವು. ಅವರು ನನಗೆ 300 ರೂಪಾಯಿಗಳನ್ನು ಕೊಟ್ಟಿದ್ದು, ಅದು ಇನ್ನೂ ನನ್ನ ವಾಲೆಟ್‌ನಲ್ಲಿ ಇದೆ. ಅವರು ನಿಮ್ಮನ್ನು ಬಹಳ ಕಂಫರ್ಟಬಲ್ ಆಗಿರುವಂತೆ ಮಾಡುತ್ತಾರೆ” ಎಂದು ಹಾಡಿನ ಶೂಟಿಂಗ್ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ ಪ್ರಿಯಾಮಣಿ.