ಕೊಲ್ಕತ್ತಾ: ಬಾಲಿವುಡ್ ನ ಹಲವಾರು ಚಿತ್ರಗಳಲ್ಲಿ ನಟಿಸಿದ್ದ ಬಂಗಾಳಿ ನಟಿ ಆರ್ಯ ಬ್ಯಾನರ್ಜಿ ದಕ್ಷಿಣ ಕೊಲ್ಕತ್ತಾದ ನಿವಾಸದಲ್ಲಿ ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನ ಮೂರನೇ ಮಹಡಿಯ ಅಪಾರ್ಟ್ಮೆಂಟ್ ಬಾಗಿಲು ತೆರೆದಾಗ ಮಲಗುವ ಕೋಣೆಯಲ್ಲಿ 33 ವರ್ಷದ ಆರ್ಯ ಬ್ಯಾನರ್ಜಿ ಮೃತದೇಹ ಕಂಡು ಬಂದಿದೆ. ‘ದಿ ದರ್ಟಿ ಪಿಕ್ಚರ್’’ನಲ್ಲಿ ಆರ್ಯ ಬ್ಯಾನರ್ಜಿ ಅಭಿನಯಿಸಿದ್ದಾರೆ.
ಸಿತಾರ್ ವಾದಕ ದಿ. ನಿಖಿಲ್ ಬಂಡೋಪಾಧ್ಯಾಯ ಅವರ ಪುತ್ರಿಯಾಗಿರುವ ಆರ್ಯ ಬ್ಯಾನರ್ಜಿ ಹಲವಾರು ಬಾಲಿವುಡ್ ಚಿತ್ರಗಳಲ್ಲಿ ಅಭಿನಯಿಸಿದ್ದು, ಮುಂಬೈನಲ್ಲಿ ಮಾಡೆಲಿಂಗ್ ಕೆಲಸದಲ್ಲಿ ನಿರತರಾಗಿದ್ದರು. ಶುಕ್ರವಾರ ಬೆಳಗ್ಗೆ ಅವರು ಫೋನ್ ಕರೆಗಳಿಗೆ ಮತ್ತು ಡೋರ್ ಬೆಲ್ ಮಾಡಿದಾಗ ಸ್ಪಂದಿಸದ ಕಾರಣ ಅನುಮಾನದ ಮೇಲೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಆಕೆ ಒಬ್ಬಂಟಿಯಾಗಿ ವಾಸಿಸುತ್ತಿದ್ದಳು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವಿಧಿವಿಜ್ಞಾನ ತಂಡ ಆಕೆಯ ಕೊಠಡಿಯಿಂದ ಹಲವು ಮಾದರಿಗಳನ್ನು ಸಂಗ್ರಹಿಸಿದೆ ಎಂದು ಪೊಲೀಸರು ಹೇಳಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.