
ಇಳಯ ದಳಪತಿ ವಿಜಯ್ ಮತ್ತು ವಿಜಯ್ ಸೇತುಪತಿ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಮಾಸ್ಟರ್’ ಟೀಸರ್ ದೀಪಾವಳಿ ಕೊಡುಗೆಯಾಗಿ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹಲ್ಚಲ್ ಸೃಷ್ಟಿಸಿದೆ.
2019 ರ ನವೆಂಬರ್ ನಲ್ಲಿ ಆರಂಭವಾಗಿದ್ದ ‘ಮಾಸ್ಟರ್’ ಚಿತ್ರದ ಚಿತ್ರೀಕರಣ ಶಿವಮೊಗ್ಗ, ತಮಿಳುನಾಡು ಸೇರಿದಂತೆ ಹಲವೆಡೆ ನಡೆಸಲಾಗಿದೆ. ಕಳೆದ ಏಪ್ರಿಲ್ ನಲ್ಲೇ ಈ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ಕೊರೋನಾ ಕಾರಣದಿಂದ ಬಿಡುಗಡೆ ವಿಳಂಬವಾಗಿದೆ.
ದೀಪಾವಳಿ ಪ್ರಯುಕ್ತ ಬಿಡುಗಡೆ ಮಾಡಿರುವ ಟೀಸರ್ ನಲ್ಲಿ ಇಳಯ ದಳಪತಿ ಅಭಿಮಾನಿಗಳಿಗೆ ರಸದೌತಣ ನೀಡುವ ಎಲ್ಲಾ ಅಂಶಗಳು ಇವೆ. ಕಥಾವಸ್ತುವನ್ನು ಬಹಿರಂಗಪಡಿಸಿಲ್ಲವಾದರೂ, ಕುತೂಹಲಕಾರಿ ಟೀಸರ್ ಅಭಿಮಾನಿಗಳು, ಚಿತ್ರರಸಿಕರನ್ನು ಸೆಳೆಯುವಂತಿದೆ. ವಿಜಯ್ ಕಾಲೇಜು ಪ್ರಾಧ್ಯಾಪಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ವಿಜಯ್ ಸೇತುಪತಿ ಎದುರಾಳಿಯಾಗಿದ್ದಾರೆ. ಮಾಳವಿಕಾ ಮೋಹನನ್, ಆಂಡ್ರಿಯಾ ಜೆರೆಮಿಯಾ, ಅರ್ಜುನ್ ದಾಸ್, ಶಾಂತನು ಭಾಗ್ಯರಾಜ್ ಮೊದಲಾದವರು ಅಭಿನಯಿಸಿದ್ದಾರೆ.