ಲಾಕ್ ಡೌನ್ ವೇಳೆ ಸಂಕಷ್ಟಕ್ಕೆ ಸಿಲುಕಿದ್ದ ಅನೇಕರಿಗೆ ನಟ ಸೋನು ಸೂದ್ ನೆರವು ನೀಡಿ ಸುದ್ದಿಯಾಗಿದ್ದರು.
ವಲಸೆ ಕಾರ್ಮಿಕರಿಗೆ ಸಾರಿಗೆ ವ್ಯವಸ್ಥೆ, ಊಟೋಪಚಾರ, ಕೆಲಸ ಕಳೆದುಕೊಂಡವರಿಗೆ ಕೆಲಸ…..ಹೀಗೆ ಅನೇಕರಿಗೆ ಸಹಾಯಹಸ್ತ ಚಾಚಿದ್ದರು.
ಇದಾದ ಬಳಿಕ ಚಿತ್ರ-ವಿಚಿತ್ರ ಬೇಡಿಕೆಗಳು ಜನರಿಂದ ಸೋನು ಬಳಿ ಬರಲಾರಂಭಿಸಿದ್ದು, ನಮ್ಮ ಅಂಗಡಿಗೊಮ್ಮೆ ಬನ್ನಿ, ಮಳಿಗೆಗೆ ಭೇಟಿ ಕೊಟ್ಟು ಸಹಾಯ ಮಾಡಿ, ಪ್ರೇಯಸಿ ಭೇಟಿಗೆ ನೆರವು ನೀಡಿ, ಗಂಡನನ್ನು ಸೇರಲು ಸಹಾಯ ಮಾಡಿ…..ಹೀಗೆ ತರಹೇವಾರಿ ಬೇಡಿಕೆಗಳು ಬರಲಾರಂಭಿಸಿವೆ.
ಇತ್ತೀಚೆಗೆ 10 ನೇ ತರಗತಿ ವಿದ್ಯಾರ್ಥಿ ನೀಲೇಶ್ ನಿಂಬೋರೆ ಎಂಬಾತ ಟ್ವೀಟ್ ಮಾಡಿದ್ದು, ಗೆಳೆಯರೆಲ್ಲರೂ viಡಿಯೋ ಗೇಮ್ ಆಡುವ ಮೂಲಕ ಲಾಕ್ ಡೌನ್ ನಲ್ಲಿ ಖುಷಿಯಿಂದ ಕಾಲ ಕಳೆಯುತ್ತಿದ್ದಾರೆ. ನನಗೂ ವಿಡಿಯೋ ಗೇಮ್ ಆಡಲು ಪಿಎಸ್4 ಕೊಡಿಸಿ ಎಂದು ದುಂಬಾಲು ಬಿದ್ದಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿರುವ ನಟ ಸೋನು ಸೂದ್, ನಿನ್ನ ಬಳಿ ಪಿಎಸ್4 ಇಲ್ಲದೇ ಇರುವುದು ವರದಾನ. ಪುಸ್ತಕ ಕೊಂಡು ಓದು. ಅದಕ್ಕೆ ಬೇಕಿದ್ದರೆ ನಾನು ಸಹಾಯ ಮಾಡುತ್ತೇನೆ ಎಂದಿದ್ದಾರೆ.