alex Certify ನಟ ಸುಶಾಂತ್ ಸಾವಿನ ಕುರಿತ ಸ್ಪೋಟಕ ಸಂಗತಿ ಬಿಚ್ಚಿಟ್ಟ ಮಾಜಿ ಸಹಾಯಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟ ಸುಶಾಂತ್ ಸಾವಿನ ಕುರಿತ ಸ್ಪೋಟಕ ಸಂಗತಿ ಬಿಚ್ಚಿಟ್ಟ ಮಾಜಿ ಸಹಾಯಕ

 

ನಿಗೂಢ ಸಾವಿಗೀಡಾಗಿರುವ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮನೆಯಲ್ಲಿನ ಎಲ್ಲರನ್ನೂ ಸಿಬಿಐ ವಿಚಾರಣೆಗೆ ಒಳಪಡಿಸಬೇಕು ಎಂದು ಮಾಜಿ ಸಹಾಯಕ ಅಂಕಿತ್ ಆಚಾರ್ಯ ಒತ್ತಾಯಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಸುಶಾಂತ್ ಎಂದಿಗೂ ಆತ್ಮಹತ್ಯೆ ಬಗ್ಗೆ ಯೋಚಿಸುವ ವ್ಯಕ್ತಿಯೇ ಅಲ್ಲ. ನಾನವರನ್ನು ತುಂಬಾ ಹತ್ತಿರದಿಂದ ಬಲ್ಲವನು ಎಂದಿದ್ದಾರೆ.

ಹೌದು, ಅಂಕಿತ್ ಆಚಾರ್ಯ 2019 ರ ವರೆಗೆ ಸುಶಾಂತ್ ಅವರಿಗೆ ಸಹಾಯಕರಾಗಿ ಕೆಲಸ ಮಾಡಿದ್ದವರು. ಸಿನಿಮಾ, ಚಿತ್ರೀಕರಣ, ಪತ್ರಿಕಾಗೋಷ್ಠಿ ಎಲ್ಲೆಡೆಯೂ ಸುಶಾಂತ್ ಜೊತೆಗೇ ಇರುತ್ತಿದ್ದರು. ಮನೆಯಲ್ಲೂ ಜೊತೆಗಿದ್ದವರು. ಅಂಕಿತ್ ಹೇಳುವ ಪ್ರಕಾರ ಸುಶಾಂತ್ ದೇಹದಾರ್ಢ್ಯತೆಗಾಗಿ ವಿಟಮಿನ್ ಮಾತ್ರೆಗಳನ್ನು ಬಿಟ್ಟರೆ ಬೇರಾವ ಅಭ್ಯಾಸವನ್ನೂ ಇಟ್ಟುಕೊಂಡಿರಲಿಲ್ಲ. ಊಟ, ತಿಂಡಿ ಎಲ್ಲ ವಿಚಾರದಲ್ಲೂ ಶಿಸ್ತಿನ ಮನುಷ್ಯ. ಆರೋಗ್ಯದ ವಿಚಾರದಲ್ಲಿ ಬಹಳ ಜಾಗರೂಕ.

ಅವರ ಶವದ ಫೋಟೋಗಳನ್ನು ನಾನೂ ಗಮನಿಸಿದ್ದೇನೆ. ನೇಣು ಬಿಗಿದ ಸ್ಥಿತಿಯಲ್ಲಿದ್ದಾಗ ಕೊರಳಕುಣಿಕೆಯಾಗಿ ಇದ್ದದ್ದು ಬಟ್ಟೆ. ಆದರೆ, ಅದನ್ನು ತೆಗೆದರೆ ನಾಯಿಯ ಬೆಲ್ಟ್ ಗುರುತು ಇದೆ. ಅದರ ಬಕಲ್ ಗುರುತೂ ಇದೆ. ಇದ್ಯಾವುದೂ ಆತ್ಮಹತ್ಯೆಯ ಕುರುಹು ಅಲ್ಲ. ಇದೊಂದು ಕೊಲೆ ಎಂಬುದರಲ್ಲಿ ಸಂಶಯ ಇಲ್ಲ. ಇದನ್ನು ಮಾಧ್ಯಮಗಳ ಮುಂದೆ ಹೇಳಿ ಕೆಲಸ ಕಳೆದುಕೊಂಡಿದ್ದೇನೆ. ನಾನಷ್ಟೇ ಅಲ್ಲದೆ, ಅಡುಗೆ ಕೆಲಸದವನ ಸ್ಥಿತಿಯೂ ಹೀಗೇ ಆಗಿದೆ. ಆದರೆ, ಸಿಬಿಐ ಅಧಿಕಾರಿಗಳು ಸುಶಾಂತ್ ಮನೆಯವರನ್ನೆಲ್ಲ ವಿಚಾರಣೆಗೆ ಒಳಪಡಿಸಿದರೆ ಸತ್ಯ ಬಯಲಾಗಲಿದೆ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...