ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐ ಮಾಡ್ತಿದೆ, ಈ ಮಧ್ಯೆ ಮುಂಬೈ ಪೊಲೀಸರು ಸುಶಾಂತ್ ಪ್ರಕರಣದ ವರದಿಯನ್ನು ಸುಪ್ರೀಂಕೋರ್ಟ್‌ಗೆ ನೀಡಿದ್ದಾರೆ. ಸುಶಾಂತ್ ಸಾವಿಗೆ ಕೆಲವು ದಿನಗಳ ಮೊದಲು ಸುಶಾಂತ್ ರಿಯಾ ಚಕ್ರವರ್ತಿಯೊಂದಿಗೆ ದೊಡ್ಡ ಜಗಳವಾಡಿದ್ದರು ಎನ್ನಲಾಗಿದೆ.
ಪರಸ್ಪರ ಕುಟುಂಬದ ಮಧ್ಯೆ ಜಗಳ ನಡೆದಿತ್ತು ಎನ್ನಲಾಗಿದೆ. ಇಬ್ಬರ ನಡುವೆ ಸಾಕಷ್ಟು ಜಗಳವಾಗಿತ್ತು. ರಿಯಾ, ಸುಶಾಂತ್ ಅಪಾರ್ಟ್ಮೆಂಟ್ ಬಿಟ್ಟಿದ್ದಳು. ರಿಯಾ, ಸುಶಾಂತ್ ಮೊಬೈಲ್ ಸಂಖ್ಯೆಯನ್ನು ಬ್ಲಾಕ್ ಮಾಡಿದ್ದಳು. ಇದರ ನಂತರ, ಜೂನ್ 14 ರಂದು ಸುಶಾಂತ್ ಶವ ಅಪಾರ್ಟ್ಮೆಂಟ್ ನಲ್ಲಿ ಸಿಕ್ಕಿತ್ತು.
ಈ ಪ್ರಕರಣದ ಬಗ್ಗೆ ಮಂಗಳವಾರ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ಪ್ರಕರಣವನ್ನು ಸಿಬಿಐಗೆ ವಹಿಸಿರುವ ಬಗ್ಗೆ ವಿಚಾರಣೆ ನಡೆಯಲಿದೆ.