
ಬಾಲಿವುಡ್ ನಟ ಸುಶಾಂತ್ ಆತ್ಮಹತ್ಯೆ ಪ್ರಕರಣದ ವಿಚಾರಣೆ ಮುಂದುವರೆದಿದೆ. ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಪ್ರತಿದಿನ ಹೊಸ ವಿಷ್ಯಗಳು ಹೊರ ಬರುತ್ತಿವೆ. ಸದ್ಯ ಎಲ್ಲರ ಕಣ್ಣು ರಿಯಾ ಚಕ್ರವರ್ತಿ ಮೇಲಿದೆ. ಈಗ ರಿಯಾ ಚಕ್ರವರ್ತಿಯ ಕರೆ ವಿವರಗಳು ಬಹಿರಂಗಗೊಂಡಿವೆ.
ಈ ಕರೆ ವಿವರಗಳ ಪ್ರಕಾರ, ಸುಶಾಂತ್, ಜನವರಿ 20 ರಿಂದ 24 ರವರೆಗೆ ತನ್ನ ಸಹೋದರಿ ರಾಣಿಯನ್ನು ಭೇಟಿಯಾಗಲು ಚಂಡೀಗಢಕ್ಕೆ ಹೋದಾಗ, ರಿಯಾ 5 ದಿನಗಳಲ್ಲಿ ಸುಮಾರು 25 ಕರೆಗಳನ್ನು ಮಾಡಿದ್ದಾಳೆ.
ಮೂಲಗಳ ಪ್ರಕಾರ, ಸುಶಾಂತ್ ನವೆಂಬರ್ ನಲ್ಲಿ ಸಹೋದರಿ ಸಹಾಯ ಕೇಳಿದ್ದರಂತೆ. ಉಳಿದ ಸಹೋದರಿಯರ ಜೊತೆ ಚಂಡೀಗಢಕ್ಕೆ ಹೋಗಲು ನಿರ್ಧರಿಸಿದ್ದರಂತೆ. ಆದ್ರೆ ರಿಯಾ ಬ್ಲಾಕ್ಮೇಲ್ ಮಾಡಿ ಇದನ್ನು ತಪ್ಪಿಸಿದ್ದಳಂತೆ. ಮತ್ತೆ ಡಿಸೆಂಬರ್ ನಲ್ಲಿ ಬೇರೆ ನಂಬರ್ ನಿಂದ ಸುಶಾಂತ್, ಸಹೋದರಿಗೆ ಕರೆ ಮಾಡಿದ್ದರಂತೆ. ರಿಯಾ ಮತ್ತು ಕುಟುಂಬಸ್ಥರು ನನ್ನನ್ನು ಮಾನಸಿಕ ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದಾರೆ. ನನಗೆ ಇದು ಇಷ್ಟವಿಲ್ಲವೆಂದು ಹೇಳಿದ್ದರಂತೆ. ಮುಂಬೈ ಬಿಟ್ಟು ಹಿಮಾಚಲಕ್ಕೆ ಹೋಗುವ ಪ್ಲಾನ್ ಮಾಡಿದ್ದರಂತೆ.
ಆ ನಂತರ ತಾವೇ ಕಾರು ಚಲಾಯಿಸಿಕೊಂಡು ಚಂಡೀಗಢಕ್ಕೆ ಹೋಗಿದ್ದರಂತೆ. ತಪ್ಪಾದ ಔಷಧಿಗಳನ್ನು ಸೇವಿಸಿದ್ದರಿಂದ ಸುಶಾಂತ್ ಗೆ ಕ್ಲಾಸ್ಟ್ರೋಫೋಬಿಯಾ ಆಗಿತ್ತಂತೆ. ಸುಶಾಂತ್ ಚಂಡೀಗಢದಲ್ಲಿ 2 ದಿನಗಳ ಕಾಲ ಉಳಿದಿದ್ದರಂತೆ. ಈ ವೇಳೆ ಸಿದ್ಧಾರ್ಥ, ರಿಯಾಗೆ ಈ ವಿಷ್ಯ ತಿಳಿಸಿದ್ದನಂತೆ. ಇದರ ಬಳಿಕ ಬ್ಲಾಕ್ಮೇಲ್ ಮಾಡ್ತಿದ್ದ ರಿಯಾ 3-4 ದಿನಗಳಲ್ಲಿ 25 ಬಾರಿ ಕರೆ ಮಾಡಿದ್ದಳಂತೆ.