
ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ, ರಿಯಾ ಮತ್ತು ಆಕೆಯ ಸಹೋದರ ಶೋವಿಕ್ ವಿಚಾರಣೆಯನ್ನು ಮಾದಕವಸ್ತು ನಿಯಂತ್ರಣ ಬ್ಯೂರೋ ಬಿಗಿಗೊಳಿಸಿದೆ. ಡ್ರಗ್ಸ್ ಪ್ರಕರಣದಲ್ಲಿ ಶೋವಿಕ್ ಈಗಾಗಲೇ ಎನ್‌ಸಿಬಿಯ ವಶದಲ್ಲಿದ್ದಾನೆ. ಇದೇ ಸಮಯದಲ್ಲಿ ರಿಯಾಳ ವಿಚಾರಣೆ ಮುಂದುವರೆದಿದೆ. ಇಂದು, ಮೂರನೇ ದಿನ ಎನ್‌ಸಿಬಿ ರಿಯಾಳನ್ನು ಪ್ರಶ್ನೆ ಮಾಡ್ತಿದೆ.
ಮೂರು ದಿನಗಳ ವಿಚಾರಣೆ ನಂತ್ರ ರಿಯಾ ಇಂದು ಡ್ರಗ್ಸ್ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾಳೆ. ಡ್ರಗ್ಸ್ ತೆಗೆದುಕೊಳ್ತಿದ್ದೆ ಎಂಬುದನ್ನು ಒಪ್ಪಿಕೊಂಡಿದ್ದಾಳೆ. ಈ ಹಿಂದೆ ವಿಚಾರಣೆಯಲ್ಲಿ ಡ್ರಗ್ಸ್ ತೆಗೆದುಕೊಳ್ತಿಲ್ಲವೆಂದು ರಿಯಾ ಹೇಳಿಕೆ ನೀಡಿದ್ದಳು. ರಿಯಾ ಇದೇ ವೇಳೆ ಯಾವ ಬಾಲಿವುಡ್ ಪಾರ್ಟಿಯಲ್ಲಿ ಡ್ರಗ್ಸ್ ವಿತರಣೆಯಾಗ್ತಿತ್ತು ಎಂಬುದನ್ನೂ ಹೇಳಿದ್ದಾಳೆ. 25 ಬಾಲಿವುಡ್ ಸ್ಟಾರ್ಸ್ ವಿಚಾರಣೆ ನಡೆಯಲಿದೆ ಎಂದು ಮೂಲಗಳು ಹೇಳಿವೆ.
ಎನ್‌ಸಿಬಿ ಬಾಲಿವುಡ್ ಕಲಾವಿದರನ್ನು ಎ, ಬಿ, ಸಿ ಎಂದು ವಿಂಗಡನೆ ಮಾಡಿದೆ. ಅದ್ರ ಪ್ರಕಾರವೇ ಒಬ್ಬೊಬ್ಬರನ್ನಾಗಿ ವಿಚಾರಣೆ ನಡೆಸಲು ಪ್ಲಾನ್ ಮಾಡಿದೆ.
ಈ ಮಧ್ಯೆ ಸೋಮವಾರ, ರಿಯಾ, ಸುಶಾಂತ್ ಸಿಂಗ್ ಸಹೋದರಿ ಪ್ರಿಯಾಂಕಾ ವಿರುದ್ಧ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.