ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣದ ಜೊತೆ ಥಳುಕು ಹಾಕಿಕೊಂಡಿದ್ದ ಡ್ರಗ್ ಪ್ರಕರಣ ಸಂಬಂಧ ಎನ್ಸಿಬಿ ಚಾರ್ಜ್ಶೀಟ್ ಸಲ್ಲಿಸಿದ್ದು ಇದರಲ್ಲಿ 35 ಮಂದಿಯ ಹೆಸರನ್ನ ಉಲ್ಲೇಖಿಸಲಾಗಿದೆ. ಸುಶಾಂತ್ ಸಿಂಗ್ ರಜಪೂತ್ರ ಗೆಳತಿಯಾಗಿದ್ದ ರಿಯಾ ಚಕ್ರವರ್ತಿ, ಆಕೆಯ ಸಹೋದರ ಶೋವಿಕ್ ಚಕ್ರವರ್ತಿ, ರಜಪೂತ್ ಮಾಜಿ ಮ್ಯಾನೇಜರ್ ಸ್ಯಾಮುವಲ್ ಮಿರಾಂದಾ, ಸಹಾಯಕ ದೀಪೇಶ್ ಸಾವಂತ್ ಸೇರಿದಂತೆ ಇನ್ನೂ ಹಲವರ ಹೆಸರು ಚಾರ್ಜ್ಶೀಟ್ನಲ್ಲಿದೆ.
ಎಲ್ಸಿಡಿ ಶೀಟ್ಸ್ ಹಾಗೂ ಮರಿಜುವಾನಾದಂತಹ ಡ್ರಗ್ಗಳನ್ನ ಭಾರೀ ಪ್ರಮಾಣದಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದ ಅನುಜ್ ಕೇಶ್ವಾನಿ ಹೆಸರು ಕೂಡ ಚಾರ್ಜ್ಶೀಟ್ನಲ್ಲಿದೆ. ಇದರ ಜೊತೆಯಲ್ಲಿ ಡ್ರಗ್ ಪೆಡ್ಲರ್ಗಳಾಗಿರುವ ಇಬ್ಬರು ಕಾಲೇಜು ವಿದ್ಯಾರ್ಥಿಗಳು, ಅಗಿಸಿಲಾಸ್ ಡೆಮೆಟ್ರಿಯಡ್ಸ್ ಸೇರಿದಂತೆ ಇಬ್ಬರು ವಿದೇಶಿಗರ ಹೆಸರು ಚಾರ್ಜ್ಶೀಟ್ನಲ್ಲಿದೆ. ಅಗಿಸಿಲಾಸ್ ಡೆಮೆಟ್ರಿಯಡ್ಸ್ ಬಾಲಿವುಡ್ ನಟ ಅರ್ಜುನ್ ರಾಮ್ಪಾಲ್ರ ಸ್ನೇಹಿತರಾಗಿದ್ದಾರೆ.
ಕ್ಷಿತಿಜಿ ಪ್ರಸಾದ್ ಹೆಸರನ್ನೂ ಎನ್ಸಿಬಿ ಅಧಿಕಾರಿಗಳು ಸೇರಿಸಿದ್ದಾರೆ. ಚಾರ್ಜ್ಶೀಟ್ನಲ್ಲಿರುವ 35 ಮಂದಿಯಲ್ಲಿ ಐವರು ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವು ಪ್ರಕರಣದ ತನಿಖೆ ವೇಳೆ ಡ್ರಗ್ ಮಾಫಿಯಾ ಬೆಳಕಿಗೆ ಬಂದಿತ್ತು. ಈ ಸಂಬಂಧ ಪ್ರಕರಣ ಕೈಗೆತ್ತಿಕೊಂಡಿದ್ದ ಎನ್ಸಿಬಿ ಸಾಕಷ್ಟು ಬಾಲಿವುಡ್ ಸೆಲೆಬ್ರಿಟಿಗಳನ್ನ ವಿಚಾರಣೆಗೆ ಒಳಪಡಿಸಿದೆ.