ಸುಶಾಂತ್ ಸಿಂಗ್ ಸಾವು ಪ್ರಕರಣದಲ್ಲಿ ತಮ್ಮ ವಿರುದ್ಧ ಆಧಾರ ರಹಿತ ಆರೋಪ ಮಾಡಿದ್ದಾರೆ ಎಂಬ ಕಾರಣಕ್ಕೆ ನಟ ಅಕ್ಷಯ್ ಕುಮಾರ್ ಬಿಹಾರ ಮೂಲದ ಯೂಟ್ಯೂಬರ್ ವಿರುದ್ಧ 500 ಕೋಟಿ ರೂಪಾಯಿ ಮೌಲ್ಯದ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ನವೆಂಬರ್ 17ರಂದು ರಶೀದ್ ಸಿದ್ದಿಕಿ ಎಂಬವರ ಎಫ್ಎಫ್ ನ್ಯೂಸ್ ಯುಟ್ಯೂಬ್ ಚಾನೆಲ್ ಗೆ ನೋಟಿಸ್ ಕಳಿಸಲಾಗಿದೆ.
ಎಫ್ ಎಫ್ ನ್ಯೂಸ್ ಯೂ ಟ್ಯೂಬ್ ಚಾನೆಲ್ನಲ್ಲಿ ಅಕ್ಷಯ್ ಕುಮಾರ್ ರಿಯಾ ಚಕ್ರವರ್ತಿಗೆ ವಿದೇಶಕ್ಕೆ ಪರಾರಿಯಾಗಲು ಸಹಕರಿಸಿದ್ದಾರೆ ಹಾಗೂ ಮಹಾರಾಷ್ಟ್ರ ಶಾಸಕ ಆದಿತ್ಯ ಠಾಕ್ರೆ ಜೊತೆ ಅಕ್ಷಯ್ ಕುಮಾರ್ ಪ್ರಕರಣ ಸಂಬಂಧ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿತ್ತು.