
ಸೂಪರ್ ಸ್ಟಾರ್ ರಜನಿಕಾಂತ್ ಅವರು ತಮ್ಮ ರಾಜಕೀಯ ಜೀವನ ಆರಂಭಿಸುವ ಕಾಲ ಸನ್ನಿಹಿತವಾಗಿದೆ ಎಂಬ ಊಹಾಪೋಹ ತಮಿಳುನಾಡಿನಲ್ಲಿ ಮತ್ತೆ ಹರಿದಾಡಿದೆ.
ಅವರು ನವೆಂಬರ್ ವೇಳೆಗೆ ರಾಜಕೀಯ ತೀರ್ಮಾನ ಘೋಷಿಸುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬಂದಿವೆ. ತಮಿಳುನಾಡು ವಿಧಾನಸಭಾ ಚುನಾವಣೆಗೆ ಆರು ತಿಂಗಳ ಮುಂಚೆ ಹೊಸ ಪಕ್ಷ ಘೋಷಣೆಯಾಗಲಿದೆ ಎನ್ನಲಾಗುತ್ತಿದೆ.
ರಜನಿ ಮಕ್ಕಳ್ ಮಂಡರಂನ ಪದಾಧಿಕಾರಿಗಳು ಹಾಕಿರುವ ಪೋಸ್ಟರ್ ಗಳು ಅನುಮಾನ ಬಲಗೊಳ್ಳಲು ಕಾರಣವಾಗಿದೆ, ಹಾಗೆಯೇ ರಜನಿಕಾಂತ್ ಅಭಿಮಾನಿ ಸಂಘಟನೆಗಳು ಜನರ ಬೆಂಬಲ ಕೋರಿರುವುದು ಮತ್ತಷ್ಟು ಪುಷ್ಟಿ ನೀಡಿದೆ. ರಜನಿ ಅವರ ಮನಸ್ಸಿನಲ್ಲಿ ಏನಿದೆ ಎಂಬುದು ತಿಳಿದಿಲ್ಲ. ಆದರೆ ನವೆಂಬರ್ ನಲ್ಲಿ ಅವರು ರಾಜಕೀಯ ಸಂಬಂಧ ತೀರ್ಮಾನ ಮಾಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.