ಮುಂಬೈ: ಖ್ಯಾತ ಬಾಲಿವುಡ್ ನಟ ಹಾಗೂ ಪಂಜಾಬ್ ಗುರುದಾಸಪುರದ ಬಿಜೆಪಿ ಎಂಪಿ ಸನ್ನಿ ಡಿಯೋಲ್ ಕೊರೊನಾಕ್ಕೆ ಒಳಗಾಗಿದ್ದಾರೆ. ಸನ್ನಿ ಖ್ಯಾತ ನಟ ಧರ್ಮೇಂದ್ರ ಅವರ ಪುತ್ರ.
“ನಾನು ಕೋವಿಡ್ ಪರೀಕ್ಷೆ ಮಾಡಿಸಿದ್ದು ಪಾಸಿಟಿವ್ ಬಂದಿದೆ. ಐಸೋಲೇಶನ್ ನಲ್ಲಿದ್ದೇನೆ. ಆರೋಗ್ಯವಾಗಿದ್ದೇನೆ. ಕಳೆದ ಕೆಲ ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದ ಎಲ್ಲರೂ ಪರೀಕ್ಷೆ ಮಾಡಿಸಿಕೊಳ್ಳಿ ಮತ್ತು ಪ್ರತ್ಯೇಕವಾಗಿರಿ” ಎಂದು 64 ವರ್ಷ ಸನ್ನಿ ಬುಧವಾರ ಟ್ವೀಟ್ ಮಾಡಿದ್ದಾರೆ.
ಸನ್ನಿ ಡಿಯೋಲ್ ಇತ್ತೀಚೆಗೆ ತೋಳಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಮುಂಬೈ ಸಮೀಪದ ಕುಲ್ಲು ಜಿಲ್ಲೆಯ ತಮ್ಮ ಫಾರ್ಮ್ ಹೌಸ್ ನಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಶೀಘ್ರ ಗುಣವಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸಿ, ಶುಭ ಹಾರೈಸಿದ್ದಾರೆ.