ಕ್ರಿಕೆಟಿಗ ಕೆ.ಎಲ್. ರಾಹುಲ್ ಹಾಗೂ ಬಾಲಿವುಡ್ ನಟ ಸುನೀಲ್ ಶೆಟ್ಟಿ ಪುತ್ರಿ ಆತಿಯಾ ಶೆಟ್ಟಿ ನಡುವೆ ಅಫೇರ್ ಇದೆ ಎಂಬ ಗುಮಾನಿಗಳು ಮಾಧ್ಯಮಗಳಲ್ಲಿ ಬಲವಾಗಿವೆ.
ಆತಿಯಾ ಹಾಗೂ ರಾಹುಲ್ ಸದ್ಯ ಇಂಗ್ಲೆಂಡ್ನಲ್ಲಿದ್ದು, ಟೆಸ್ಟ್ ಸರಣಿಯುದ್ದಕ್ಕೂ ತಮ್ಮ ಸಂಗಾತಿ ಆತಿಯಾ ತಮ್ಮೊಂದಿಗೆ ಇರಲಿದ್ದಾರೆ ಎಂದು ತಂಡದ ನಿರ್ವಹಣಾ ಅಧಿಕಾರಿಗಳಿಗೆ ರಾಹುಲ್ ತಿಳಿಸಿದ್ದಾರೆ.
ತಮ್ಮ ಪುತ್ರಿ ಇಂಗ್ಲೆಂಡ್ನಲ್ಲೇ ಇದ್ದಾರೆ ಎಂದು ಖಾತ್ರಿಪಡಿಸಿದ ಸುನೀಲ್ ಶೆಟ್ಟಿ, ಆಕೆ ತನ್ನ ಸಹೋದರ ಅಹಾನ್ ಜೊತೆಗೆ ಇದ್ದಾಳೆ ಎಂದಿದ್ದು, ಇಬ್ಬರೂ ಅಲ್ಲಿಗೆ ಹಾಲಿಡೇ ಮಾಡಲು ತೆರಳಿದ್ದಾರೆ ಎಂದಿದ್ದಾರೆ.
ರಾಹುಲ್-ಆತಿಯಾ ಡೇಟಿಂಗ್ ಗುಮಾನಿ ಕುರಿತು ಯಾವುದೇ ಹೇಳಿಕೆ ನೀಡಲು ನಿರಾಕರಿಸಿರುವ ಸುನೀಲ್, ಅವರಿಬ್ಬರೂ ’ಒಳ್ಳೆ ಜೋಡಿ’ ಎಂದಿರುವುದು ಮಾಧ್ಯಮಗಳಿಗೆ ಇನ್ನಷ್ಟು ರೆಕ್ಕೆಪುಕ್ಕ ಸಿಕ್ಕಂತಾಗಿದೆ.
ಶಾಲಾ ದಾಖಲಾತಿ: ಪೋಷಕರಿಗೆ ರಿಲೀಫ್ ನೀಡಿದ ದೆಹಲಿ ಸರ್ಕಾರ
“ಸದ್ಯದ ಮಟ್ಟಿಗೆ ಅಂತಾರಾಷ್ಟ್ರೀಯ ಬ್ರಾಂಡ್ ಒಂದು ಅವರಿಬ್ಬರನ್ನೂ ತನ್ನ ರಾಯಭಾರಿಗಳನ್ನಾಗಿ ನೇಮಕ ಮಾಡಿಕೊಂಡಿದೆ. ಅವರಿಬ್ಬರೂ ಜೊತೆಯಾಗಿ ಚೆನ್ನಾಗಿ ಕಾಣುತ್ತಾರೆ ಎಂದು ನನಗೆ ಅನಿಸುತ್ತದೆ. ಅವರು ಚೆನ್ನಾಗಿ ಕಾಣುವ ಜೋಡಿಯಲ್ಲವೇ ? ಬ್ರಾಂಡ್ ದೃಷ್ಟಿಯಿಂದ ಇದು ಚೆನ್ನಾಗಿ ಕೆಲಸ ಮಾಡುತ್ತದೆ. ಅವರಿಬ್ಬರು ಜಾಹೀರಾತಿಯನಲ್ಲೆ ಜೊತೆಯಾಗಿ ಚೆನ್ನಾಗಿ ಕಾಣುತ್ತಾರೆ” ಎಂದು ಸುನೀಲ್ ತಿಳಿಸಿದ್ದಾರೆ.
ತಮ್ಮ ಮಗಳ ಅಫೇರ್ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುನೀಲ್, “ನೀವು ಅವರನ್ನೇ ಕೇಳಿಕೊಳ್ಳುವುದು ಒಳ್ಳೆಯದು ಎಂದು ನನಗೆ ಅನಿಸುತ್ತದೆ” ಎಂದಿದ್ದಾರೆ.
https://www.instagram.com/p/CNzH2XRnupL/?utm_source=ig_web_copy_link
https://www.instagram.com/p/CHNaFkmg4CE/?utm_source=ig_web_copy_link