
ರಾಜ್ಯದ ರಾಜಕಾರಣವೇ ಬೇರೆ, ಮಂಡ್ಯ ಜಿಲ್ಲೆಯ ರಾಜಕಾರಣವೇ ಬೇರೆ. ನಾನು ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಮಂಡ್ಯದಲ್ಲಿ ನನ್ನ ಮಗ ಅಭಿಶೇಕ್ ಗೆ ಜನರ ಪ್ರೀತಿ ಸಿಗುತ್ತಿದೆ. ಚುನಾವಣೆಗೆ ಸ್ಪರ್ಧಿಸುವಂತೆ ಎಲ್ಲಾ ಕಡೆ ಜನರು ಹೇಳುತ್ತಿದ್ದಾರೆ ಎಂದು ಮಂಡ್ಯ ಲೋಕಸಭೆ ಸದಸ್ಯೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, ಅಭಿಶೇಕ್ ಗೆ ಎಲ್ಲಾ ಪಕ್ಷಗಳು ಟಿಕೆಟ್ ನೀಡಲು ಸಿದ್ಧವಾಗಿವೆ. ಆದರೆ, ಅಭಿಶೇಕ್ ರಾಜಕೀಯದ ಬಗ್ಗೆ ನಿರ್ಧಾರ ಮಾಡಿಲ್ಲ. ಸಿನಿಮಾದ ಬಗ್ಗೆ ಹೆಚ್ಚು ಗಮನಹರಿಸಿದ್ದಾನೆ. ಎರಡು ತಿಂಗಳಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಅಭಿಶೇಕ್ ಸ್ಪರ್ಧೆ ವಿಚಾರಕ್ಕೆ ಜೆಡಿಎಸ್ ಗೆ ಭಯ ಶುರುವಾಗಿದೆ ಎಂದು ಹೇಳಿದ್ದಾರೆ.