ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ಫ್ಯಾಂಟಮ್’ ಚಿತ್ರದ ಚಿತ್ರೀಕರಣ ಹೈದರಾಬಾದ್ ನಲ್ಲಿ ಶುರುವಾಗಿದೆ.
ಅಂದ ಹಾಗೆ, ಚಿತ್ರತಂಡ ಹೈದರಾಬಾದ್ ನಲ್ಲಿ ಚಿತ್ರೀಕರಣ ಕೈಗೊಂಡಿದ್ದರೂ ಕನ್ನಡ ಕಾರ್ಮಿಕರಿಗೆ ಕೆಲಸ ನೀಡಿದೆ. ರಾಜ್ಯದಿಂದ 250 ಮಂದಿ ಕಾರ್ಮಿಕರು ಹೈದರಾಬಾದ್ ಗೆ ತೆರಳಿದ್ದು ಗುರುವಾರದಿಂದ ಶೂಟಿಂಗ್ ಶುರುವಾಗಿದೆ. ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಚಿತ್ರತಂಡ ಚಿತ್ರೀಕರಣ ಆರಂಭಿಸಲಾಗಿದೆ.
ಸರ್ಕಾರದ ಮಾರ್ಗಸೂಚಿಯಂತೆ ಕೆಲಸ ಆರಂಭವಾಗಿದ್ದು ರಾಜ್ಯದಿಂದ ಕಾರ್ಮಿಕರನ್ನು ಕರೆದುಕೊಂಡು ಹೋಗಲಾಗಿದೆ. ತಂತ್ರಜ್ಞರು, ಪ್ರೊಡಕ್ಷನ್, ಕಲಾ ವಿಭಾಗ ಸೇರಿ ಎಲ್ಲ ವಿಭಾಗಗಳಿಗೆ ಕನ್ನಡ ಚಿತ್ರರಂಗದವರನ್ನು ಕರೆದುಕೊಂಡು ಹೋಗಲಾಗಿದೆ. ಈ ಬಗ್ಗೆ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ನಿರ್ದೇಶಕ ಅನೂಪ್ ಭಂಡಾರಿ ಮತ್ತು ನಿರ್ಮಾಪಕ ಜಾಕ್ ಮಂಜು ಅವರು ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, ‘ಫ್ಯಾಂಟಮ್’ ಶೂಟಿಂಗ್ ಶುರು ಮಾಡಿದ್ದಾರೆ.