ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷೆಯ ಚಿತ್ರ ‘ಫ್ಯಾಂಟಮ್’ ಚಿತ್ರೀಕರಣಕ್ಕೆ ಸಮಯ ನಿಗದಿಯಾಗಿದೆ.
ಮುಂದಿನ ವಾರದಿಂದ ಚಿತ್ರೀಕರಣ ಆರಂಭವಾಗಲಿದೆ. ಚಿತ್ರತಂಡ ಹೈದರಾಬಾದ್ ಗೆ ಪ್ರಯಾಣ ಬೆಳೆಸಲಿದ್ದು ಕ್ವಾರಂಟೈನ್ ನಂತರ ಚಿತ್ರೀಕರಣ ಆರಂಭವಾಗಲಿದೆ ಎಂದು ಹೇಳಲಾಗಿದೆ.
ಹೈದರಾಬಾದ್ ನ ಅನ್ನಪೂರ್ಣ ಸ್ಟುಡಿಯೋದ 3 ಫ್ಲೋರ್ ಗಳನ್ನು ಬಾಡಿಗೆ ಪಡೆದು ವಿಶೇಷ ಸೆಟ್ ನಿರ್ಮಿಸಲಾಗ್ತಿದೆ. ಕಾಡು, ಜಲಪಾತ, ಸೇತುವೆ, ಗುಡಿಸಲು ಸೇರಿ ವಿಶೇಷ ಸೆಟ್ ಗಳನ್ನು ಹೈ ಬಜೆಟ್ ನಲ್ಲಿ ನಿರ್ಮಾಣ ಮಾಡಿ ಶೂಟಿಂಗ್ ನಡೆಸಲಾಗುವುದು.
ಸೆಟ್ ನಿರ್ಮಾಣ ಕಾರ್ಯ ಮುಂದುವರೆದಿದ್ದು ಅಂತಿಮ ಹಂತಕ್ಕೆ ಬಂದಿದೆ. ಮುಂದಿನ ವಾರದಿಂದ ಚಿತ್ರೀಕರಣಕ್ಕೆ ಪ್ಲಾನ್ ಮಾಡಿಕೊಳ್ಳಲಾಗಿದೆ. ನಿಯಮಾನುಸಾರ ಚಿತ್ರೀಕರಣ ನಡೆಸಲಾಗುವುದು. ಅನೂಪ್ ಭಡಾರಿ ನಿರ್ದೇಶನದಲ್ಲಿ, ಜಾಕ್ ಮಂಜು ನಿರ್ಮಾಣದಲ್ಲಿ ಮೂಡಿಬರಲಿರುವ ‘ಫ್ಯಾಂಟಮ್’ ಚಿತ್ರೀಕರಣ ಶುರುವಾಗುತ್ತಿರುವುದು ಸುದೀಪ್ ಅಭಿಮಾನಿಗಳಲ್ಲಿ ಸಂತಸ ತಂದಿದೆ.