ರಾಜ್ಯದಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ಇಲ್ಲದ ಕಾರಣ ಹೈದರಾಬಾದ್ ನಲ್ಲಿ ಸುದೀಪ್ ಅಭಿನಯದ ‘ಫ್ಯಾಂಟಮ್’ ಚಿತ್ರೀಕರಣ ನಡೆಸಲಾಗುವುದು.
ಜುಲೈ 1 ರಂದು ಹೈದರಾಬಾದ್ ನಲ್ಲಿ ‘ಫ್ಯಾಂಟಮ್’ ಚಿತ್ರೀಕರಣ ಶುರುವಾಗಲಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ನೀಡಲಾಗಿದೆ. ರಾಜ್ಯದಲ್ಲಿ ಅನುಮತಿ ಸಿಕ್ಕಿಲ್ಲ. ಇದರಿಂದಾಗಿ ಹೈದರಾಬಾದ್ ನಲ್ಲಿ ‘ಫ್ಯಾಂಟಮ್’ ಚಿತ್ರೀಕರಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಹೈದರಾಬಾದ್ ಅನ್ನಪೂರ್ಣ ಸ್ಟೂಡಿಯೋದಲ್ಲಿ ಜೂನ್ 16 ರಿಂದ ಸೆಟ್ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಜುಲೈ 1 ರಿಂದ ಶೂಟಿಂಗ್ ಶುರುವಾಗಲಿದ್ದು, ಸುದೀಪ್ ಸೇರಿದಂತೆ ಚಿತ್ರತಂಡವದರು ಪಾಲ್ಗೊಳ್ಳಲಿದ್ದಾರೆ. ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಚಿತ್ರೀಕರಣ ಆರಂಭಿಸಲಾಗುವುದು ಎಂದು ಹೇಳಲಾಗಿದೆ.