ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತೊಂದು ಸಿನಿಮಾದಲ್ಲಿ ಒಟ್ಟಿಗೆ ನಟಿಸಲಿದ್ದಾರೆ.
ಪ್ರೇಮ್ ನಿರ್ದೇಶನದ ‘ದಿ ವಿಲನ್’ನಲ್ಲಿ ಸುದೀಪ್ ಮತ್ತು ಶಿವಣ್ಣ ಒಟ್ಟಿಗೆ ನಟಿಸಿದ್ದರು. ಇಂದು ಶಿವಣ್ಣನ ಹೊಸ ಚಿತ್ರ ಆರಂಭವಾಗಿದ್ದು ಶುಭಾಶಯ ಹೇಳಲು ಬಂದಿದ್ದ ಸುದೀಪ್ ಒನ್ ಲೈನ್ ಸ್ಟೋರಿ ಹೇಳಿದ್ದಾರೆ. ಇದಕ್ಕೆ ಮರು ಮಾತಿಲ್ಲದೇ ಒಪ್ಪಿದ ಶಿವಣ್ಣ, ನೀವೇ ಡೈರೆಕ್ಷನ್ ಮಾಡಿ ಎಂದು ಸುದೀಪ್ ಗೆ ಸಲಹೆ ನೀಡಿದ್ದಾರೆ.
ಸುದೀಪ್ ಒಂದೊಳ್ಳೆ ಸ್ಟೋರಿಯನ್ನು ರೆಡಿ ಮಾಡಿದ್ದು, ‘ನೀ ಸಿಗೋವರೆಗೂ’ ಸಿನಿಮಾಕ್ಕೆ ಶುಭ ಕೋರಲು ಬಂದಿದ್ದ ವೇಳೆ ಶಿವಣ್ಣರಿಗೆ ಸ್ಟೋರಿ ಹೇಳಿದ್ದಾರೆ. ಇದಕ್ಕೆ ಶಿವಣ್ಣ ಒಪ್ಪಿ ನೀವೇ ಡೈರೆಕ್ಷನ್ ಮಾಡಿ ಎಂದಿದ್ದಾರೆನ್ನಲಾಗಿದೆ.