ಬೆಂಗಳೂರು: ನಟ ಸುದೀಪ್ ಅವರಿಗೆ ಜೀವ ಬೆದರಿಕೆ ಪತ್ರ ಬರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೊತೆಯಲ್ಲಿದ್ದವರಿಂದಲೇ ಸಂಚು ನಡೆದಿದೆ ಎಂದು ಹೇಳಲಾಗಿದೆ.
ಸಿನಿಮಾರಂಗದವರ ಕೈವಾಡವಿದೆ ಎಂದು ಈಗಾಗಲೇ ಸುದೀಪ್ ಹೇಳಿದ್ದಾರೆ. ಸುದೀಪ್ ಜೊತೆಯಲ್ಲಿದ್ದವರನ್ನೇ ಆ ಶಂಕಿತ ವ್ಯಕ್ತಿ ಬಳಸಿಕೊಂಡಿದ್ದಾನೆ. ಈ ಕುರಿತಾದ ಪೂರಕ ಹಾಗೂ ಸಾಂದರ್ಭಿಕ ಸಾಕ್ಷ್ಯಗಳು ಪೊಲೀಸರಿಗೆ ಲಭ್ಯವಾಗಿದೆ.
ಪುಟ್ಟೇಟ್ಟೆನಹಳ್ಳಿ ಪೊಲೀಸರು, ಸಿಸಿಬಿಯಿಂದ ಶಂಕಿತನಿಗಾಗಿ ಹುಡುಕಾಟ ನಡೆದಿದೆ. ಪತ್ರದಲ್ಲಿನ ಕೆಲವು ಅಂಶ ಆಧರಿಸಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ನಟ ಸುದೀಪ್ ಆಪ್ತನಿಂದಲೇ ಸಂಚು ನಡೆದಿರುವ ಆರೋಪ ಕೇಳಿ ಬಂದಿದೆ. ಸುದೀಪ್ ಆಪ್ತನನ್ನು ಬಳಸಿಕೊಂಡು ಬೆದರಿಕೆ ಹಾಕಿರುವ ಸಾಧ್ಯತೆ ಇದೆ.
ಇತ್ತೀಚೆಗಷ್ಟೇ ಕೆಲಸ ಬಿಟ್ಟಿದ್ದ ಕಾರ್ ಚಾಲಕನಿಗಾಗಿ ಹುಡುಕಾಟ ನಡೆಸಲಾಗಿದೆ. ನಟ ಸುದೀಪ್ ಕಾರ್ ಚಾಲಕನ ಮೇಲೆ ಪೊಲೀಸರಿಗೆ ಅನುಮಾನ ಮೂಡಿದೆ.