ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ನಮ್ಮ-ನಿಮ್ಮ ನಡುವೆ ಇರುವ ಅಸಾಧಾರಣ ಪ್ರತಿಭೆಗಳಿಗೂ ಒಂದು ಸ್ಟಾರ್‌ಡಂ ಸಿಗುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ.
ನಾಗ್ಪುರದ ಚಾಯ್‌ವಾಲಾ ಡಾಲಿ ಸಹ ಇಂಥ ಸ್ಟಾರ್. ’ಡಾಲಿ ಕೀ ತಾಪ್ರಿ’ ಹೆಸರಿನ ಟೀ ಸ್ಟಾಲ್‌ನಲ್ಲಿ ತಮ್ಮ ಚಹಾ ಹಾಗೂ ಅದನ್ನು ಗ್ರಾಹಕರಿಗೆ ಸರ್ವ್ ಮಾಡುವ ವಿಧದಿಂದ ಡಾಲಿ ಸೆಲೆಬ್ರಿಟಿ ಆಗಿಬಿಟ್ಟಿದ್ದಾರೆ.
ಚಹಾ ಮಾಡುವ ಪಾತ್ರೆಗೆ 4-5 ಎತ್ತರದಿಂದ ಒಂದೇ ಒಂದು ಹನಿ ಹಾಲನ್ನು ಚೆಲ್ಲದೇ ಸುರಿಯುವ ಡಾಲಿ, ಕಳೆದ 20 ವರ್ಷಗಳಿಂದ ಈ ಸ್ಟಾಲ್‌ನಲ್ಲಿ ಚಹಾ ಮಾರುತ್ತಿದ್ದು ಯುವಕರ ಮೆಚ್ಚಿನ ಚಾಯ್‌ವಾಲಾ ಆಗಿದ್ದಾರೆ.
ಟೀ ಸರ್ವ್ ಮಾಡುವಾಗ ಮಾತ್ರವಲ್ಲದೇ ತಮ್ಮ ಗ್ರಾಹಕರಿಗೆ ವಿಶಿಷ್ಟ ರೀತಿಯಲ್ಲಿ ಸಿಗರೇಟ್ ಹಚ್ಚುವುದನ್ನು ತೋರಿಸಿಕೊಡುವ ಡಾಲಿ, ಭಾರೀ ಸ್ವಾಗ್ ಬೆಳೆಸಿಕೊಂಡಿದ್ದಾರೆ. ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ತಮ್ಮ ಅಂಗಡಿ ನಡೆಸುವ ಡಾಲಿ, ಬರೀ ಏಳು ರೂಪಾಯಿಗೆ ಕಪ್ ಚಹಾ ಕೊಡುತ್ತಾರೆ.
ದಕ್ಷಿಣ ಭಾರತದ ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್‌ರ ದೊಡ್ಡ ಅಭಿಮಾನಿಯಾದ ಡಾಲಿ ತಾವೂ ಅವರ ಮ್ಯಾನರಿಸಂಗಳನ್ನೇ ಅಳವಡಿಸಿಕೊಂಡಿರುವುದಾಗಿ ಬಲೇ ಖುಷಿಯಿಂದ ಹೇಳಿಕೊಳ್ಳುತ್ತಾರೆ.
https://www.facebook.com/watch/?v=1083671622057485&t=2