ಸ್ಟಾರ್ ಟ್ರೆಕ್ ಸೀರೀಸ್‌ನ ನಟ ದಿವಂಗತ ಜೇಮ್ಸ್ ದೂಲನ್ ಅವರ ಚಿತಾಭಸ್ಮವನ್ನು ಖಾಸಗಿ ಗಗನಯಾತ್ರಿಯೊಬ್ಬರು 12 ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಇಟ್ಟಿದ್ದರು ಎಂದು ತಿಳಿದು ಬಂದಿದೆ.
ಬಾಹ್ಯಾಕಾಶ ಕೇಂದ್ರಕ್ಕೆ ಕಾಲಿಟ್ಟ ಮೊದಲ ಖಾಸಗಿ ಗಗನಯಾತ್ರಿಗಳಲ್ಲಿ ಒಬ್ಬರಾದ ರಿಚರ್ಡ್ ಗಾರಿಯಟ್, 12 ದಿನಗಳ ಮಿಶನ್ ಒಂದರ ವೇಳೆ ಅದು ಹೇಗೆ ದೂಲನ್‌ರ ಚಿತಾಭಸ್ಮವನ್ನು ಅಲ್ಲಿಗೆ ಕೊಂಡೊಯ್ದರೆಂದು ಇದೀಗ ಬಹಿರಂಗ ಪಡಿಸಲಾಗಿದೆ.
ತಮ್ಮ ಈ ಭೇಟಿ ವೇಳೆ ದಿವಂಗತ ನಟನ ಲ್ಯಾಮಿನೇಟೆಡ್ ಚಿತ್ರವೊಂದನ್ನು ಬಾಹ್ಯಾಕಾಶ ಕೇಂದ್ರದ ಕೊಲಂಬಸ್ ಮಾಡ್ಯೂಲ್‌ನ ತಳದಲ್ಲಿ ಅಂಟಿಸಿ ಬಂದಿದ್ದರು.
2005ರಲ್ಲಿ ತಮ್ಮ 85ನೇ ವಯಸ್ಸಿನಲ್ಲಿ ನಿಧನರಾದ ನಟ ದೂಲನ್ ತಮ್ಮ ಚಿತಾಭಸ್ಮವನ್ನು ಬಾಹ್ಯಾಕಾಶ ಕೇಂದ್ರದಲ್ಲಿ ಬಿಡಬೇಕು ಎಂಬ ಆಸೆ ಹೊಂದಿದ್ದರು.