
ಕೊಲ್ಕೊತ್ತಾ: ಪಶ್ಚಿಮ ಬಂಗಾಳ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳಿಂದ ಬಂಧಿತರಾಗಿರುವ ಮಾಜಿ ಸಚಿವ ಪಾರ್ಥ ಚಟರ್ಜಿ ಆಪ್ತೆ, ನಟಿ ಅರ್ಪಿತಾ ಮುಖರ್ಜಿ ಮನೆಯಲ್ಲಿ ರಾಶಿಗಟ್ಟಲೇ ಹಣದ ಜೊತೆಗೆ ಸೆಕ್ಸ್ ಟಾಯ್ಸ್ ಗಳು ಕೂಡ ಪತ್ತೆಯಾಗಿವೆ.
ಬಂಗಾಳಿ ನಟಿ ಅರ್ಪಿತಾ ಮುಖರ್ಜಿ ಅವರ ಫ್ಲಾಟ್ನಿಂದ ‘ಸೆಕ್ಸ್ ಟಾಯ್ಸ್’ ವಶಪಡಿಸಿಕೊಂಡಿದೆ. ಅವುಗಳನ್ನು ಯಾರು ಕೊಟ್ಟಿದ್ದಾರೆ. ಅಥವಾ ಆನ್ ಲೈನ್ ನಲ್ಲಿ ತರಿಸಿಕೊಂಡಿದ್ದರೆ ಎನ್ನುವುದು ಗೊತ್ತಾಗಿಲ್ಲ.
ಪಶ್ಚಿಮ ಬಂಗಾಳದ ಮಾಜಿ ಸಚಿವ ಪಾರ್ಥ ಚಟರ್ಜಿ ಭಾಗಿಯಾಗಿರುವ ಹಗರಣದಲ್ಲಿ ಅರ್ಪಿತಾ ಮುಖರ್ಜಿ ಹೆಸರು ಕೇಳಿಬಂದಾಗಿನಿಂದ ಆಕೆ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿದ್ದಾರೆ. ಇಡಿ ತನಿಖಾ ಅಧಿಕಾರಿಗಳು ಆಕೆಯ ಫ್ಲಾಟ್ನಿಂದ ಭಾರಿ ಮೊತ್ತದ ಹಣವನ್ನು ವಶಪಡಿಸಿಕೊಂಡ ನಂತರ ಹಲವಾರು ಲೈಂಗಿಕ ಆಟಿಕೆಗಳನ್ನು ಪತ್ತೆ ಮಾಡಿದ್ದಾರೆ ಎಂದು ಹೇಳಲಾಗಿದೆ.