![](https://kannadadunia.com/wp-content/uploads/2020/10/67a7c25d-4d79-4da8-bfed-5b69b46fe633.jpg)
ಬಾಲಿವುಡ್ ತಾರೆ ಶಾರುಖ್ ಖಾನ್ ಮಗಳು ಸುಹಾನಾ ಖಾನ್ ಸಾಮಾಜಿಕ ಜಾಲತಾಣದಲ್ಲಿ ಮಾಡುವ ಪೋಸ್ಟ್ ಗಳಿಂದ ಸುದ್ದಿಯಾಗುತ್ತಿದ್ದಾರೆ. ಇದೀಗ ಮೈಬಣ್ಣದ ವಿಷಯ ಪ್ರಸ್ತಾಪಿಸಿ ಗಮನ ಸೆಳೆದಿದ್ದಾರೆ.
ಇದೀಗ ತನ್ನ ಮೈಬಣ್ಣದ ಬಗ್ಗೆ ಅಭಿಪ್ರಾಯ ನೀಡಿದ್ದು, ಆಕೆ 12 ವರ್ಷದವಳಿದ್ದಾಗ ತನ್ನ ಮೈಬಣ್ಣದ ಬಗ್ಗೆ ಇದ್ದ ಅನಿಸಿಕೆ ವ್ಯಕ್ತಮಾಡಿದ್ದಾಳೆ.
ನಾವು ಭಾರತೀಯರು, ಹೀಗಾಗಿ ಸಹಜವಾಗಿ ಚರ್ಮ ಕಂದು ಬಣ್ಣಬರಲಿದೆ ಎಂಬ ಮಾತುಗಳ ಜತೆ ತನ್ನ ಮೈಬಣ್ಣದ ಕುರಿತಾಗಿ ಇನ್ಸ್ಟಾ ಗ್ರಾಂನಲ್ಲಿ ಒಂದು ಫೋಟೋವನ್ನೂ ಹಾಕಿಕೊಂಡಿದ್ದಾರೆ.
ಇದು ನನ್ನ ಬಗ್ಗೆ ಮಾತ್ರವಲ್ಲ, ಇದು ಯಾವುದೇ ಕೀಳರಿಮೆ ಅನುಭವಿಸುತ್ತಿರುವ ಪ್ರತಿಯೊಬ್ಬರ ಕುರಿತು ಎಂದು ಹೇಳಿಕೊಂಡಿದ್ದಾರೆ.
![](https://kannadadunia.com/wp-content/uploads/2020/10/e3704145-e15d-4202-8c14-1683f8917a82.jpg)
![](https://kannadadunia.com/wp-content/uploads/2020/10/3182b3ea-614f-447a-a8d9-7eb15b99585f.jpg)