alex Certify ಆರೋಗ್ಯದಲ್ಲಿ ಚೇತರಿಕೆ ಕಾಣದ ಖ್ಯಾತ ಗಾಯಕ SPB ಗೆ ಸಾಯಿಬಾಬಾ ಹಾಡು ಕೇಳಿಸಿ ಚಿಕಿತ್ಸೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯದಲ್ಲಿ ಚೇತರಿಕೆ ಕಾಣದ ಖ್ಯಾತ ಗಾಯಕ SPB ಗೆ ಸಾಯಿಬಾಬಾ ಹಾಡು ಕೇಳಿಸಿ ಚಿಕಿತ್ಸೆ

ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ದಿನದಿನವು ಕ್ಷೀಣಿಸುತ್ತಿದೆ. ಅವರು ಹಾಡಿದ ಗೀತೆಗಳನ್ನು ಕೇಳಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕಳೆದ 15 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಸ್.ಪಿ. ಬಾಲಸುಬ್ರಹ್ಮಣ್ಯಂ ಆಸ್ಪತ್ರೆಯ ಆರನೇ ಮಹಡಿಯಲ್ಲಿರುವ ಐಸಿಯು ವಾರ್ಡ್ನಲ್ಲಿ ಇದ್ದಾರೆ. ತಜ್ಞವೈದ್ಯರ ತಂಡದಿಂದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಸತತ ಸಂಪರ್ಕದಲ್ಲಿದ್ದು ನಿಗಾ ವಹಿಸಲಾಗಿದೆ.

ಎಸ್ಪಿಬಿ ಆರೋಗ್ಯ ಸುಧಾರಿಸಿದ್ದು, ವೆಂಟಿಲೇಟರ್ ತೆರವುಗೊಳಿಸಲಾಗಿದೆ ಎಂದು ಹೇಳಲಾಗಿತ್ತು. ಆದರೆ ಇದನ್ನು ಎಸ್ಪಿಬಿ ಅವರ ಪುತ್ರ ಚರಣ್ ಅಲ್ಲಗಳೆದಿದ್ದಾರೆ. ಕೊರೊನಾ ಸೋಂಕು ತಗುಲಿ ಆಗಸ್ಟ್ 5 ರಿಂದ ಆಸ್ಪತ್ರೆಗೆ ದಾಖಲಾಗಿರುವ ಎಸ್ಪಿಬಿ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿಲ್ಲ. ಯಥಾಸ್ಥಿತಿಯಲ್ಲಿದ್ದು, ಹಾಡುಗಳನ್ನು ಕೇಳಿಸಿ ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...