ಸುಧಾ ಕೊಂಗರಾ ನಿರ್ದೇಶನದ ತಮಿಳು ಚಿತ್ರ ‘ಸೂರರೈ ಪೋಟ್ರು’ 93 ನೇ ಆಸ್ಕರ್ ಪ್ರಶಸ್ತಿಗೆ ಅರ್ಹರಾದ ಚಿತ್ರಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.
ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ ಈ ಮಾಹಿತಿ ಹಂಚಿಕೊಂಡಿದೆ. 366 ಚಿತ್ರಗಳಲ್ಲಿ ಸೂರ್ಯ ಅಭಿನಯದ ‘ಸೂರರೈ ಪೋಟ್ರು’ 2021 ರ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಅಧಿಕೃತ ಪ್ರವೇಶ ಪಡೆದುಕೊಂಡಿದೆ.
ಅಕಾಡೆಮಿ ಬಿಡುಗಡೆ ಮಾಡಿದ ಪಟ್ಟಿಯ ಪ್ರಕಾರ, ‘ದಿ ಕ್ರಿಸ್‌ಮಸ್ ಕ್ರಾನಿಕಲ್ಸ್ 2’, ‘ದಿ ಕ್ರೂಡ್ಸ್: ಎ ನ್ಯೂ ಏಜ್’, ‘ಡಾ 5 ಬ್ಲಡ್ಸ್’, ‘ಮುಲಾನ್’, ‘ಟೆನೆಟ್’, ‘ವಂಡರ್ ವುಮನ್ 1984’, ‘ದಿ ವೈಟ್ ಟೈಗರ್’ ಮೊದಲಾವು ಪಟ್ಟಿಯಲ್ಲಿವೆ.
ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ನಿರ್ದೇಶಕ, ಬೆಸ್ಟ್ ಒರಿಜಿನಲ್ ಸ್ಕೋರ್ ವಿಭಾಗದಲ್ಲಿ ಆಸ್ಕರ್ ಪಟ್ಟಿಗೆ ‘ಸೂರರೈ ಪೋಟ್ರು’ ಸೇರ್ಪಡೆಯಾಗಿದೆ. ಈ ವರ್ಷದ ಆಸ್ಕರ್ ಪ್ರಶಸ್ತಿಗೆ ಪರಿಗಣಿಸಲ್ಪಟ್ಟ ಏಕೈಕ ಭಾರತೀಯ ಚಿತ್ರ ಇದಾಗಿದೆ ಎಂದು ಹೇಳಲಾಗಿದೆ. ಇದು ಏರ್ ಡೆಕ್ಕನ್ ಸಂಸ್ಥಾಪಕ ಕ್ಯಾಪ್ಟನ್ ಗೋಪಿನಾಥ್ ಅವರ ಜೀವನ ಚರಿತ್ರೆಯನ್ನು ಆಧರಿಸಿದ ಚಿತ್ರವಾಗಿದೆ.