
ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರು ಮರಳಿ ತಂತಮ್ಮ ಊರುಗಳಿಗೆ ತೆರಳಲು ನೆರವಿಗೆ ಬರುತ್ತಿರುವ ಬಾಲಿವುಡ್ ನಟ ಸೋನು ಸೂದ್ ರಿಯಲ್ ಲೈಫ್ ಹೀರೊ ಆಗಿದ್ದಾರೆ. ಅವರ ಈ ಸತ್ಕಾರ್ಯಕ್ಕೆ ಇಡೀ ದೇಶವೇ ಮೆಚ್ಚಿಕೊಂಡಿದೆ.
ದೂರದ ಒಡಿಶಾದಲ್ಲಿ ಸೋನುರ ಪೋಸ್ಟರ್ ಒಂದನ್ನು ಹಾಕಿರುವ ಅವರ ಅಭಿಮಾನಿಗಳು, ’ಕೊರೋನಾ ಫೈಟರ್ ಕಿಂಗ್ ಸೋನು ಸೂದ್’ ಎಂದು ಮೆಚ್ಚುಗೆಯ ಕ್ಯಾಪ್ಷನ್ ಹಾಕಿದ್ದಾರೆ. ಸೋನು ಜೊತೆಗೆ ಒಡಿಯಾ ನಟರಾದ ಸಬ್ಯಸಾಚಿ ಮಿಶ್ರಾ ಹಾಗೂ ರಾಣಿ ಪಂಡಾರನ್ನು ಸಹ ಮೆಚ್ಚಿಕೊಂಡು ಪೋಸ್ಟರ್‌ಗಳಲ್ಲಿ ಹಾಕಲಾಗಿದೆ.
ಈ ಚಿತ್ರವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ರೀಟ್ವಿಟ್ ಮಾಡಿರುವ ಸೋನು, “ಇದು ಬಹಳ ಸ್ವೀಟ್ ಆಗಿದೆ. ಆದರೆ ನಾನು ಇದಕ್ಕೆ ಅರ್ಹನಲ್ಲ. ನಿಮ್ಮ ಪ್ರೀತಿ ಹಾಗೂ ಹಾರೈಕೆಗಳು ನನ್ನನ್ನು ಚೆನ್ನಾಗಿ ಇಟ್ಟಿವೆ” ಎಂದಿದ್ದಾರೆ.