ದಕ್ಷಿಣ ಭಾರತದ ಖ್ಯಾತ ನಟಿ ಶ್ರೀಯಾ ಶರಣ್ ತಮಗೆ ಮಗು ಜನಿಸಿದ ವಿಚಾರವನ್ನು 2 ವರ್ಷದ ನಂತರ ಬಹಿರಂಗಪಡಿಸಿದ್ದಾರೆ.
2020ರ ಲಾಕ್ಡೌನ್ ಸಂದರ್ಭದಲ್ಲಿ ತಮಗೆ ಹೆಣ್ಣು ಮಗು ಜನಿಸಿತು ಎಂಬುದನ್ನು ಈಗ ಹೇಳಿಕೊಂಡಿದ್ದಾರೆ. ಇಡೀ ಜಗತ್ತು ಕಷ್ಟದಲ್ಲಿದ್ದ ವೇಳೆಯಲ್ಲಿ ನಮ್ಮ ಪ್ರಪಂಚ ಬದಲಾಯಿತು. ಅಂತಹ ಸಂದರ್ಭದಲ್ಲಿ ನಮಗೆ ಹೆಣ್ಣು ಮಗುವಾಗಿತ್ತು ಎಂದು ತಿಳಿಸಿದ್ದಾರೆ.
ತಮಿಳು, ತೆಲುಗು, ಕನ್ನಡ ಸೇರಿದಂತೆ ಬಹು ಭಾಷೆಗಳಲ್ಲಿ ನಟಿಸಿರುವ ಶ್ರೀಯಾ ಶರಣ್ ತಮಗೆ ಮಗುವಾದ ವಿಚಾರವನ್ನು ಎರಡು ವರ್ಷ ಮುಚ್ಚಿಟ್ಟಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ.
2018 ರ ಮಾರ್ಚ್ ನಲ್ಲಿ ರಷ್ಯಾದ ಗೆಳೆಯ ಅಂಡ್ರೇ ಕೊಶ್ಚಿವ್ ಅವರನ್ನು ಶ್ರೀಯಾ ಮದುವೆಯಾಗಿದ್ದರು. 2000 ಲಾಕ್ ಡೌನ್ ವೇಳೆ ಈ ದಂಪತಿಗೆ ಹೆಣ್ಣು ಮಗು ಜನಿಸಿದೆ.