ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಇಂದು ಮಧ್ಯಾಹ್ನ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಶುಭ ಸುದ್ದಿಯನ್ನ ಗಾಯಕಿ ಶ್ರೇಯಾ ಘೋಷಾಲ್ ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ಶೇರ್ ಮಾಡಿದ್ದಾರೆ.
ದೇವರ ಆಶೀರ್ವಾದದಿಂದ ಇಂದು ಮಧ್ಯಾಹ್ನ ಗಂಡು ಮಗು ಜನಿಸಿದೆ. ಇಂತಹ ಸಂತಸವನ್ನ ನಾವು ಹಿಂದೆಂದೂ ಅನುಭವಿಸಿರಲಿಲ್ಲ. ಪತಿ ಶಿಲಾದಿತ್ಯ ಹಾಗೂ ನಮ್ಮ ಕುಟುಂಬಸ್ಥರು ತುಂಬಾ ಸಂತೋಷಗೊಂಡಿದ್ದೇವೆ. ನಿಮ್ಮೆಲ್ಲರ ಕಾಳಜಿಗೆ ಧನ್ಯವಾದಗಳು ಎಂದು ಇನ್ಸ್ಟಾಗ್ರಾಂನಲ್ಲಿ ಶ್ರೇಯಾ ಘೋಷಾಲ್ ಬರೆದುಕೊಂಡಿದ್ದಾರೆ. ಶ್ರೇಯಾ ಘೋಷಾಲ್ರ ಈ ಪೋಸ್ಟ್ಗೆ ಶುಭಾಶಯಗಳ ಮಹಾಪೂರವೇ ಹರಿದುಬರ್ತಿದೆ.
ಶ್ರೇಯಾ ಘೋಷಾಲ್ ಹಾಗೂ ಶಿಲಾದಿತ್ಯ ಮುಖ್ಯೋಪಾಧ್ಯಾಯ 2015ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. 10 ವರ್ಷಗಳ ಕಾಲ ಪರಸ್ಪರ ಪ್ರೀತಿಸಿದ್ದ ಈ ಜೋಡಿ ಬಳಿಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು. ಮಾರ್ಚ್ 4ನೇ ತಾರೀಖಿನಂದು ಶ್ರೇಯಾ ತಾವು ಗರ್ಭಿಣಿಯಾಗಿರುವ ವಿಚಾರವನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
https://www.instagram.com/p/CPLCt-Ngx_M/?utm_source=ig_web_copy_link