ಶಾರೂಕ್ ಖಾನ್ ಹಾಗೂ ಕಾಜೋಲ್ ಹಿಂದಿ ಚಿತ್ರರಂಗದ ಮ್ಯಾಜಿಕಲ್ ಜೋಡಿ. ಶಾರೂಕ್-ಕಾಜೋಲ್ ಅಭಿನಯದ ‘ದಿಲ್ ವಾಲೇ ದುಲ್ಹನಿಯಾ ಲೇಜಾಯೆಂಗೇ’ ಚಿತ್ರ ಪ್ರೇಕ್ಷಕರ ಆಲ್ ಟೈಮ್ ಫೇವರಿಟ್.
ಆದ್ರೆ ಶಾರೂಕ್ ಮೊದಲು ಮೊದಲು ಕಾಜೋಲ್ ರನ್ನ ದ್ವೇಷಿಸ್ತಾ ಇದ್ರು. ‘ಬಾಜಿಗರ್’ ಚಿತ್ರದಲ್ಲಿ ಶಾರೂಕ್ ಹಾಗೂ ಕಾಜೋಲ್ ಒಟ್ಟಾಗಿ ನಟಿಸ್ತಾ ಇದ್ರು. ಈ ವೇಳೆ ಅಮೀರ್ ಖಾನ್, ಶಾರೂಕ್ ಬಳಿ ಕಾಜೋಲ್ ಬಗ್ಗೆ ವಿಚಾರಿಸಿದ್ರಂತೆ. ಕಾಜೋಲ್ ಹೇಗೆ ? ನಾನೂ ಆಕೆಯೊಂದಿಗೆ ನಟಿಸಬಹುದಾ ಅಂತಾ ಅಮೀರ್ ಕೇಳಿದ್ರು.
ಆಗ ಶಾರೂಕ್, ಕಾಜೋಲ್ ಬಗ್ಗೆ ಸದಾಭಿಪ್ರಾಯ ವ್ಯಕ್ತಪಡಿಸಿರ್ಲಿಲ್ಲ. ಆಕೆಗೆ ಕೆಲಸದ ಮೇಲೆ ಗಮನವಿಲ್ಲ, ಅವಳ ಜೊತೆ ನಟಿಸಬೇಡ ಎಂದಿದ್ದರಂತೆ ಕಿಂಗ್ ಖಾನ್.
ಕಾಜೋಲ್ ಶೂಟಿಂಗ್ ಸೆಟ್ ನಲ್ಲಿ ಅರಳು ಹುರಿದಂತೆ ಮಾತನಾಡ್ತಾ ಇದ್ರು. ಆಕೆಯ ದೊಡ್ಡ ಧ್ವನಿ, ಸದಾಕಾಲ ಮಾತು ಶಾರೂಕ್ ಗೆ ಬೇಸರ ತರಿಸಿತ್ತು, ಇದೇ ಕಾರಣಕ್ಕೆ ಆಕೆಯ ಜೊತೆ ನಟಿಸದಂತೆ ಅಮೀರ್ ಗೆ ಸಲಹೆ ನೀಡಿದ್ರು. ಇದು ಅಂದಿನ ಮಾತಾಯ್ತು, ಈಗ ಶಾರೂಕ್- ಕಾಜೋಲ್ ಬೆಸ್ಟ್ ಫ್ರೆಂಡ್ಸ್. ಜೊತೆಯಾಗಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಪ್ರಿಯರ ಫೇವರಿಟ್ ಜೋಡಿ ಇವರು.