ಬಾಲಿವುಡ್ ನಟ ಶಾಹೀದ್ ಕಪೂರ್ ತಮ್ಮ ಮಿರರ್ ಫೋಟೋವೊಂದನ್ನ ಶೇರ್ ಮಾಡಿದ್ದು ತಮ್ಮ ಹೊಸ ಹೇರ್ಸ್ಟೈಲ್ ಮೂಲಕ ಅಭಿಮಾನಿಗಳ ಎದೆಯಲ್ಲಿ ಹಲ್ಚಲ್ ಎಬ್ಬಿಸಿದ್ದಾರೆ.
ಕಬೀರ್ ಸಿಂಗ್ ಖ್ಯಾತಿಯ ಶಾಹಿದ್ ಕಪೂರ್ ಇನ್ಸ್ಟಾಗ್ರಾಂನಲ್ಲಿ ಈ ಫೋಟೋವನ್ನ ಶೇರ್ ಮಾಡಿದ್ದಾರೆ.
ಉದ್ದನೆಯ ಗಡ್ಡ ಹಾಗೂ ಡಿಫರೆಂಟ್ ಹೇರ್ಸ್ಟೈಲ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಬಿಳಿ ಹಾಗೂ ನೀಲಿ ಬಣ್ಣದ ಶರ್ಟ್ನಲ್ಲಿ ಪದ್ಮಾವತ್ ಸ್ಟಾರ್ ಸಖತ್ ಡ್ಯಾಶಿಂಗ್ ಆಗಿ ಕಾಣುತ್ತಿದ್ದಾರೆ. ಫೋಟೋ ಜೊತೆಗೆ ಮಿರರ್ ಸೆಲ್ಫಿ ಅಂತಾ ಕ್ಯಾಪ್ಶನ್ ಹಾಕಿದ್ದಾರೆ.