ಬಾಲಿವುಡ್ ನ ಕಿಂಗ್ ಖಾನ್ ಶಾರೂಖ್ ಈ ಹಿಂದೆ ಒಂದು ತಪ್ಪನ್ನು ಮಾಡಿದ್ದು, ತಕ್ಷಣವೇ ಅದನ್ನು ಒಪ್ಪಿಕೊಂಡು ಕ್ಷೆಮೆ ಕೂಡ ಕೇಳಿದ್ದರು. ಹೌದು ‘ದಿಲ್ ಸೆ’ ಚಿತ್ರ 18 ವರ್ಷ ಪೂರೈಸಿದ ಸಂಭ್ರಮಾಚರಣೆ ವೇಳೆ ಈ ಘಟನೆ ನಡೆದಿತ್ತು.
ಮಣಿರತ್ನಂ ಅವರ ‘ದಿಲ್ ಸೆ’ ಸಿನಿಮಾ 18 ವರ್ಷ ಪೂರೈಸಿದ್ದಕ್ಕೆ ಶಾರೂಖ್ ಸಾಮಾಜಿಕ ತಾಣ ಇನ್ ಸ್ಟಾಗ್ರಾಮ್ ನಲ್ಲಿ ಸಂತಸ ಹಂಚಿಕೊಂಡಿದ್ದರು. ಇಡೀ ಚಿತ್ರತಂಡಕ್ಕೆ ಥ್ಯಾಂಕ್ಸ್ ಹೇಳಿದ್ದರು. ‘ದಿಲ್ ಸೆ’ ತಮ್ಮ ಫೇವರಿಟ್ ಚಿತ್ರ ಎಂದಿದ್ದ ಶಾರುಖ್, ತಮಗೆ ಜೋಡಿಯಾಗಿದ್ದ ಮನೀಶಾ ಕೊಯಿರಾಲಾಗೂ ಧನ್ಯವಾದ ಅರ್ಪಿಸಿದ್ದರು.
ಆದ್ರೆ ಪ್ರೀತಿ ಝಿಂಟಾ ಅವರನ್ನು ಮರೆತೇಬಿಟ್ಟಿದ್ದ ಶಾರುಖ್ ಗೆ ಬಳಿಕ ತಪ್ಪಿನ ಅರಿವಾಗಿತ್ತು. ಕೂಡಲೇ ಪ್ರೀತಿ ಝಿಂಟಾ ಬಳಿ ಕ್ಷಮೆ ಕೇಳಿದ್ದ ಶಾರೂಖ್, ‘ದಿಲ್ ಸೆ’ ಸಿನಿಮಾದ ಯಶಸ್ಸಿನ ಶ್ರೇಯ ಪ್ರೀತಿಗೂ ಸೇರುತ್ತೆ ಅಂತಾ ಹೇಳಿಕೊಂಡಿದ್ದರು.