ಆಸ್ಕರ್ ಪ್ರಶಸ್ತಿ ಪುರಸ್ಕೃತ, ಜೇಮ್ಸ್ ಬಾಂಡ್ ಖ್ಯಾತಿಯ ನಟ ಸೀನ್ ಕಾನರಿ ವಿಧಿವಶರಾಗಿದ್ದಾರೆ. ಬಾಂಡ್ ಸಿನಿಮಾಗಳ ಮೂಲಕವೇ ಖ್ಯಾತಿ ಗಳಿಸಿದ್ದ ಜನಪ್ರಿಯ ನಟ ಅವರಾಗಿದ್ದರು.
ಅಂತರರಾಷ್ಟ್ರೀಯ ಖ್ಯಾತಿಯ ಸ್ಟಾರ್ ಸೀನ್ ಕಾನರಿ ಅವರಿಗೆ 90 ವರ್ಷ ವಯಸ್ಸಾಗಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ಅಪ್ರತಿಮ ನಟನಾಗಿ ಗೂಢಚಾರ ಸಿನಿಮಾಗಳಲ್ಲಿ ಅಮೋಘ ಅಭಿನಯ ನೀಡಿದ್ದಾರೆ.
ಕಳೆದ ಆಗಸ್ಟ್ ನಲ್ಲಿ 90ನೇ ಹುಟ್ಟುಹಬ್ಬವನ್ನು ಅವರು ಆಚರಿಸಿಕೊಂಡಿದ್ದರು. 40 ವರ್ಷಗಳಿಗೂ ಹೆಚ್ಚು ಕಾಲ ಪ್ರೇಕ್ಷಕರನ್ನು ರಂಜಿಸಿದ ಜನಪ್ರಿಯ ನಟ ಅವರಾಗಿದ್ದಾರೆ.
‘ಏಜೆಂಟ್ 007’, ದಿ ವಿಂಡ್ ಅಂಡ್ ದಿ ಲಯನ್,’ ‘ದಿ ಮ್ಯಾನ್ ಹೂ ವುಡ್ ಬಿ ಕಿಂಗ್’ ಮತ್ತು ‘ಇಂಡಿಯಾನಾ ಜೋನ್ಸ್ ಮತ್ತು ದಿ ಲಾಸ್ಟ್ ಕ್ರುಸೇಡ್’ ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.