ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ರಿಯಾ ಚಕ್ರವರ್ತಿ ಪೇಟಿಂಗ್ ಒಂದನ್ನು ಉಲ್ಲೇಖಿಸಿದ್ದಾಳೆ. ಯುರೋಪ್ ಪ್ರವಾಸದ ಸಮಯದಲ್ಲಿ ಸುಶಾಂತ್ ಆ ವರ್ಣಚಿತ್ರವನ್ನು ನೋಡಿದ ನಂತರ ಅಸಾಮಾನ್ಯವಾಗಿ ವರ್ತಿಸಲು ಪ್ರಾರಂಭಿಸಿದ್ದರು ಎಂದು ರಿಯಾ ಹೇಳಿದ್ದಾಳೆ. ಆ ವರ್ಣಚಿತ್ರದಲ್ಲಿ, ಶನಿ ತನ್ನ ನವಜಾತ ಮಗನನ್ನು ತಿನ್ನುತ್ತಿದ್ದಾನೆ.
ಇದು ನಿಜಕ್ಕೂ ಸಾಕಷ್ಟು ಗೊಂದಲದ ಕಲಾಕೃತಿಯಾಗಿದೆ. ಇದು ಮಾತ್ರವಲ್ಲ ವಿಶ್ವದಲ್ಲಿ ಅನೇಕ ವರ್ಣಚಿತ್ರಗಳಿವೆ. ಅವುಗಳನ್ನು ನೋಡಿದ್ರೆ ಮನಸ್ಸು ಅಸಮಾಧಾನಗೊಳ್ಳುತ್ತದೆ.
ಉಕ್ರೇನ್ ಕಲಾವಿದೆ ಸ್ವೆಟ್ಲಾನಾ ಟೆಲೆಟ್ಜ್ ಇಂತಹ ಬಹಳಷ್ಟು ಚಿತ್ರಗಳನ್ನು ಬಿಡಿಸಿದ್ದಾರೆ. ಅವ್ರ ಒಂದು ವರ್ಣಚಿತ್ರ ಸಾಕಷ್ಟು ಚರ್ಚೆಗೊಳಗಾಗಿದೆ. ದಿ ರೇನ್ ವುಮನ್ ಎಂಬ ಹೆಸರಿನ ಈ ಚಿತ್ರದಲ್ಲಿ ಮಳೆಯ ಮಧ್ಯೆ ಸ್ತ್ರೀ ಆಕೃತಿ ಇದೆ. ಕೇವಲ 5 ಗಂಟೆಗಳಲ್ಲಿ ಈ ಚಿತ್ರವನ್ನು ಬಿಡಿಸಿದ್ದಾರಂತೆ. ಅನೇಕರು ಈ ವರ್ಣಚಿತ್ರವನ್ನು ಖರೀದಿಸಿದ್ದರು. ಆದ್ರೆ ಈ ಚಿತ್ರ ಮನೆ ಪ್ರವೇಶಿಸಿದ ನಂತ್ರ ಸಾಕಷ್ಟು ಸಮಸ್ಯೆಗಳನ್ನು ಜನರು ಎದುರಿಸಿದ್ದರು.
ಲವ್ ಲೆಟರ್ಸ್ ರೆಪ್ಲಿಕಾ ಎಂಬ ವರ್ಣಚಿತ್ರ ಜನರನ್ನು ಹೆದರಿಸುತ್ತದೆ. ಅದರಲ್ಲಿ ಒಂದು ಮುದ್ದಾದ ಹುಡುಗಿ ಒಂದು ಕೈಯಲ್ಲಿ ಗುಲಾಬಿಗಳನ್ನು ಹಿಡಿದು ಒಂದು ಕೈಯಲ್ಲಿ ಹೊದಿಕೆ ಹಿಡಿದಿದ್ದಾಳೆ. ಹೊಂಬಣ್ಣದ ಹುಡುಗಿ ಸುಮಾರು ನಾಲ್ಕು ಅಥವಾ ಐದು ವರ್ಷದವಳು. ಹೆಣ್ಣು ಮಗುವಿನ ಚಿತ್ರದ ಹಿಂದೆ ನಿಜವಾದ ಕಥೆ ಇದೆ. ಈಕೆ ಮೆಟ್ಟಿಲಿನಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾಳೆ. ಈ ವರ್ಣಚಿತ್ರ ಮಾರಾಟಕ್ಕೆ ಇಡಲಾಗಿತ್ತು. ಆದ್ರೆ 1 ನಿಮಿಷ ಕೂಡ ಈ ಪೇಟಿಂಗ್ ನೋಡಲಾಗದೆ ಜನರು ತೊಂದರೆ ಅನುಭವಿಸಿದ್ದರು.
ದಿ ಆಂಗ್ವಿಶ್ಡ್ ಮ್ಯಾನ್ ಎಂಬ ವರ್ಣಚಿತ್ರವು ವಿಶ್ವದ ಅತ್ಯಂತ ಭಯಾನಕ ಮತ್ತು ಕಾಡುವ ಚಿತ್ರಕಲೆಯಾಗಿದೆ. ಇದನ್ನು ಯಾರು ಮಾಡಿದ್ದಾರೆಂದು ಯಾರಿಗೂ ತಿಳಿದಿಲ್ಲ. ಆದರೆ ಕಲಾವಿದ ಅದನ್ನು ತನ್ನದೇ ಅಥವಾ ಇನ್ನೊಬ್ಬರ ರಕ್ತದಿಂದ ಮಾಡಿದ್ದಾನೆ ಎನ್ನಲಾಗಿದೆ. ಈ ಪೇಟಿಂಗ್ ಮನೆಗೆ ತೆಗೆದುಕೊಂಡು ಹೋದವರು ಸಾಕಷ್ಟು ಭಯಪಟ್ಟಿದ್ದಾರೆ. ವಿಚಿತ್ರ ಧ್ವನಿಗಳು ಕೇಳ್ತಿದ್ದವು ಎನ್ನಲಾಗಿದೆ.