ಬೆಂಗಳೂರು: ಸ್ಯಾಂಡಲ್ವುಡ್ ಹಿರಿಯ ನಟ ಸತ್ಯಜಿತ್(72) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಟ ಸತ್ಯಜಿತ್ ಅವರು ಬೌರಿಂಗ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ರಾತ್ರಿ 2 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.
ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿತ್ತು.
ಹಿಂದಿ ಚಿತ್ರ ‘ಅಂಕುಶ್’ ಮೂಲಕ ಚಿತ್ರರಂಗ ಪ್ರವೇಶಿಸಿದ ಸತ್ಯಜಿತ್ ಅವರು ‘ಅರುಣರಾಗ’, ‘ನಮ್ಮೂರ ಹಮ್ಮೀರ’, ‘ಮಾಣಿಕ್ಯ’, ‘ಅಪ್ಪು’, ‘ಗಜ’ ಸೇರಿದಂತೆ ಸುಮಾರು 600 ಚಿತ್ರಗಳಲ್ಲಿ ನಟಿಸಿದ್ದಾರೆ. ಜನಪ್ರಿಯ ನಟರಾಗಿದ್ದ ಅವರು, ಪಾತ್ರಗಳಿಗೆ ಜೀವ ತುಂಬುತ್ತಿದ್ದರು.
ಸತ್ಯಜಿತ್ ಎಂದೇ ಚಿರಪರಿಚಿತರಾಗಿರುವ ಅವರ ಹೆಸರು ಸೈಯದ್ ನಿಜಾಮುದ್ದೀನ್. ಅವರ ವೃತ್ತಿಪರ ಹೆಸರು ಸತ್ಯಜಿತ್.