ಕಾರ್ಟೂನ್ ನೆಟ್ವರ್ಕ್ನಲ್ಲಿ ಪ್ರಸಾರವಾಗುವ ಪವರ್ಪಫ್ ಗರ್ಲ್ಸ್ ಎಂಬ ಕಾರ್ಟೂನ್ ಯಾರಿಗೆ ತಾನೆ ಗೊತ್ತಿರಲ್ಲ ಹೇಳಿ. ಮೂವರು ಸೂಪರ್ ಗರ್ಲ್ಸ್ ಮಧ್ಯೆ ನಡೆಯುವ ಕತೆಯಿದು. ಒಂದು ವೇಳೆ ಪವರ್ಪಫ್ ಗರ್ಲ್ಸ್ ಸೀರೆ ಉಟ್ಕೊಂಡು ಇರ್ತಾ ಇದ್ರೆ ಹೇಗೆ ಇರ್ತಿತ್ತು..?
ಇಂತಹದ್ದೊಂದು ಪ್ರಯತ್ನ ಮಾಡಿದ್ದಾರೆ ಹಂಶಾ ಥವಸೀಲನ್, ಮೇಕಪ್ ಕಲಾವಿದೆ ಆಗಿರುವ ಇವ್ರು ಮೂರು ಸೀರೆಗಳನ್ನ ಉಟ್ಟು ಪವರ್ಪಫ್ ಗರ್ಲ್ಸ್ ರೀತಿಯಲ್ಲಿ ಪೋಸ್ ಕೊಟ್ಟಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪವರ್ಪಫ್ ಗರ್ಲ್ಸ್ ಧರಿಸುವ ಗುಲಾಬಿ, ಹಸಿರು ಹಾಗೂ ನೀಲಿ ಬಣ್ಣದ ಸೀರೆಯನ್ನುಟ್ಟು ಪವರ್ಪಫ್ ಗರ್ಲ್ಸ್ ಹಾಡಿಗೆ ವಿಡಿಯೋ ಮಾಡಿದ್ದಾರೆ. ಗುಲಾಬಿ ಬಣ್ಣದ ಸೀರೆ ಬ್ಲೊಸಮ್, ನೀಲಿ ಬಣ್ಣದ ಸೀರೆ ಬಬಲ್ ಹಾಗೂ ಹಸಿರು ಬಣ್ಣದ ಸೀರೆ ಬಟರ್ಕಪ್ ರೂಪವಾಗಿದೆ.
https://www.instagram.com/p/CGP3qeAhxy0/?utm_source=ig_web_copy_link