
ಸೈಫ್ ಅಲಿ ಖಾನ್ ಪುತ್ರಿ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಕಾಶ್ಮೀರದಲ್ಲಿ ತಮ್ಮ ಕುಟುಂಬಸ್ಥರ ಜೊತೆ ಎಂಜಾಯ್ ಮಾಡ್ತಿದ್ದಾರೆ. ತಾಯಿ ಅಮೃತಾ ಸಿಂಗ್ ಹಾಗೂ ಸಹೋದರ ಇಬ್ರಾಹಿಂ ಅಲಿ ಖಾನ್ ಜೊತೆ ಗೊಂಡಾಲಾ ರೈಡ್ನ್ನು ಸಾರಾ ಎಂಜಾಯ್ ಮಾಡಿದ್ದಾರೆ.
ಕುಟುಂಬಸ್ಥರ ಜೊತೆ ಪರ್ವತಾರೋಹಣದ ವಿಡಿಯೋ ಹಾಗೂ ಫೋಟೋಗಳನ್ನ ಶೇರ್ ಮಾಡಿದ್ದ ನಟಿ ಇದೀಗ ಬೆಚ್ಚನೆಯ ನೀರಿನಲ್ಲಿ ಸ್ವಿಮ್ಮಿಂಗ್ ಎಂಜಾಯ್ ಮಾಡಿದ್ದಾರೆ. ಬೆಳಗ್ಗಿನ ಉಪಹಾರಕ್ಕೆ ವ್ಯಾಫಲ್ಗಳನ್ನ ಸೇವಿಸುದ ಮೂಲಕ ಸಖತ್ ಚಿಲ್ ಮಾಡ್ತಿದ್ದಾರೆ.
ಸೋಮವಾರ ಸಂಜೆ ಸಾರಾ ಶೇರ್ ಮಾಡಿದ ಫೋಟೊಗಳಲ್ಲಿ ಒಂದರಲ್ಲಿ ವ್ಯಾಫಲ್ಗಳಿದ್ದರೆ ಮತ್ತೊಂದು ಕಡೆ ಪರ್ವತಗಳ ನೋಟ ಹಾಗೂ ಹಾಟ್ ವಾಟರ್ ಪೂಲ್ಗಳನ್ನ ಕಾಣಬಹುದಾಗಿದೆ.
ಸೋಮವಾರ ಸಾರಾ ಶೇರ್ ಮಾಡಿದ ವಿಡಿಯೋವೊಂದರಲ್ಲಿ ಅವರು ವರದಿಗಾರರಂತೆ ಮಾತನಾಡಿದ್ದಾರೆ. ತಮ್ಮ ಕಾಶ್ಮೀರ ಪ್ರವಾಸದ ಬಗ್ಗೆ ವರದಿಗಾರರ ರೀತಿಯಲ್ಲಿ ವಿಮರ್ಶೆ ಮಾಡುವ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ.
https://www.instagram.com/p/CNfDoMtpV2H/?utm_source=ig_web_copy_link


