ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ನಂಟಿನ ಪ್ರಕರಣದಲ್ಲಿ ಬಂಧಿತರಾಗಿರುವ ನಟಿಯರಾದ ರಾಗಿಣಿ ಮತ್ತು ಸಂಜನಾ ಒಂದೇ ಕೊಠಡಿಯಲ್ಲಿ ತಂಗಿದ್ದಾರೆ.
ಮಡಿವಾಳದ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಒಂದೇ ಕೊಠಡಿ ಇದ್ದು 5 ಬೆಡ್ ಗಳಿವೆ. ರಾಗಿಣಿ ಮತ್ತು ಸಂಜನಾ ಅವರು ಒಂದೇ ಕೊಠಡಿಯಲ್ಲಿದ್ದರೂ ಅವರಿಬ್ಬರ ನಡುವೆ ಮಾತುಕತೆ ನಡೆದಿಲ್ಲವೆನ್ನಲಾಗಿದೆ.
ಇಬ್ಬರೂ ಒಂದೇ ಕೊಠಡಿಯಲ್ಲಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಮಾತುಕತೆ, ಚರ್ಚೆ ಮಾಡದಂತೆ ಮೂವರು ಮಹಿಳಾ ಪೊಲೀಸರನ್ನು ನಿಯೋಜಿಸಲಾಗಿದೆ. ಹೊರಗೆ ಪುರುಷ ಪೊಲೀಸರನ್ನು ನಿಯೋಜಿಸಲಾಗಿದ್ದು, ನಿನ್ನೆ ನಟಿ ರಾಗಿಣಿ ವಿಚಾರಣೆಗೆ ಸ್ಪಂದಿಸದೇ ಅಸಹಕಾರ ತೋರಿದ್ದಾರೆ. ಬೆನ್ನು ನೋವು ಇದೆ ಮಾತನಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ. ಇನ್ನು ಸಂಜನಾ ರಾತ್ರಿ ಊಟ ಮಾಡಲು ಒಪ್ಪದೇ ಮಾಧ್ಯಮದವರೊಂದಿಗೆ ಮಾತನಾಡಲು ಅವಕಾಶ ಕೊಡುವಂತೆ ಕೇಳಿಕೊಂಡಿದ್ದಾರೆ ಎನ್ನಲಾಗಿದೆ.