alex Certify BREAKING: ಮತ್ತೆ ಸುದ್ದಿಗೆ ಬಂದ ನಟಿ ಸಂಜನಾ, ಆಪ್ತ ಸ್ನೇಹಿತನ ವಿರುದ್ಧವೇ ದೂರು –ಹೂಡಿಕೆ ಹೆಸರಲ್ಲಿ ವಂಚನೆ ಆರೋಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಮತ್ತೆ ಸುದ್ದಿಗೆ ಬಂದ ನಟಿ ಸಂಜನಾ, ಆಪ್ತ ಸ್ನೇಹಿತನ ವಿರುದ್ಧವೇ ದೂರು –ಹೂಡಿಕೆ ಹೆಸರಲ್ಲಿ ವಂಚನೆ ಆರೋಪ

ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಸಂಜನಾ ಗರ್ಲಾನಿ ಅವರಿಗೆ ವಂಚನೆ ಮಾಡಲಾಗಿದೆ. ಅವರ ಆಪ್ತ ರಾಹುಲ್ ಥೋನ್ಸೆ ನಟಿ ಸಂಜನಾಗೆ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.

ಸ್ನೇಹಿತನ ವಿರುದ್ಧ ಸಂಜನಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಹೂಡಿಕೆ ಹೆಸರಲ್ಲಿ ಹಣ ಪಡೆದು ರಾಹುಲ್ ವಂಚನೆ ಮಾಡಿದ್ದಾರೆ. ನಾನು ಗೋವಾ ಮತ್ತು ಕೊಲಂಬೊ ಕ್ಯಾಸಿನೊಗಳಲ್ಲಿ ಪಾಲುದಾರನಾಗಿದ್ದು, ಹಣ ಹೂಡಿಕೆ ಮಾಡಿದಲ್ಲಿ ಹೆಚ್ಚಿನ ಲಾಭ ಗಳಿಸಬಹುದು ಎಂದು ಹೇಳಿದ್ದರಿಂದ ಆತನ ಮಾತು ನಂಬಿ ಸಂಜನಾ ಹಣ ಕೊಟ್ಟಿದ್ದಾರೆ. ಆತನಿಂದ ವಂಚನೆಗೊಳಗಾಗಿರುವ ಬಗ್ಗೆ ಇಂದಿರಾ ನಗರ ಠಾಣೆಗೆ ದೂರು ನೀಡಿದ್ದಾರೆ.

ಡ್ರಗ್ಸ್ ಪ್ರಕರಣ, ಕ್ಯಾಬ್ ಚಾಲಕನೊಂದಿಗೆ ಕಿರಿಕ್ ನಿಂದಾಗಿ ಸುದ್ದಿಯಾಗಿದ್ದ ಸಂಜನಾ ಈಗ ಸ್ನೇಹಿತನಿಂದಲೇ ವಂಚನೆಗೊಳಗಾದ ಬಗ್ಗೆ ದೂರು ನೀಡಿದ್ದಾರೆ. ರಾಹುಲ್ ಜೊತೆಗೆ ಗೋವಾ ಮತ್ತು ಕೊಲಂಬೊ ಕ್ಯಾಸಿನೋಗಳಲ್ಲಿ ಸಂಜನಾ ಹೂಡಿಕೆ ಮಾಡಿದ್ದು, ಆತ ಲಾಭಾಂಶ ಕೊಡದೇ ವಂಚಿಸಿದ ಆರೋಪ ಮಾಡಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...