
ನಿರ್ಮಾಪಕರ ಮನೆ ಮುಂದೆ ಭಿಕ್ಷುಕರಂತೆ ಕಾದು ಸಂಭಾವನೆ ಪಡೆದು ರೇಷನ್ ಅಂಗಡಿ ಮುಂದೆ ಅಕ್ಕಿ, ಸೀಮೆ ಎಣ್ಣೆಗೆ ಕ್ಯೂ ನಿಂತವರು ನಾವು. ಇವತ್ತು 2 ಸಿನಿಮಾಗೇ ಕುಬೇರನ ಮಕ್ಕಳಾಗಿದ್ದಾರೆ. ಇದು ನನಗೆ ಅರ್ಥವಾಗಿಲ್ಲ ಎಂದು ನಟ ಜಗ್ಗೇಶ್ ಹೇಳಿದ್ದಾರೆ.
ಸ್ಯಾಂಡಲ್ವುಡ್ ನಲ್ಲಿ ಡ್ರಗ್ಸ್ ನಂಟು ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಜಗ್ಗೇಶ್, ತಂದೆಗೆ 1981ರಲ್ಲಿ 5000 ರೂ. ಸಾಲ ಕೇಳಿದಕ್ಕೆ ಸಾರ್ವಜನಿಕವಾಗಿ ಚಪ್ಪಲಿಯಲ್ಲಿ ಹೊಡೆದು ತಾಕತ್ತಿದ್ದರೆ ಹೋಗಿ ದುಡಿ ಎಂದು ಹೊರಗೆ ದೂಡಿದ್ದರು. ಅವಮಾನ ಮಾಡಿ ಅಂದು ಅಪ್ಪ ನನಗೆ ಜೀವನ ಕಲಿಸಿದರು ಎಂದು ಹೇಳಿದ್ದಾರೆ.
30 ಸಿನಿಮಾದಲ್ಲಿ ನಟಿಸಿದ್ದರೂ ನಿರ್ಮಾಪಕರ ಮನೆ ಮುಂದೆ ಭಿಕ್ಷುಕರಂತೆ ಸಂಭಾವನೆಗೆ ಕಾದು ಸಂಭಾವನೆ ಕೊಟ್ಟ ತಕ್ಷಣ ರೇಷನ್ ಅಂಗಡಿ ಮುಂದೆ ಅಕ್ಕಿ, ಸೀಮೆಯೆಣ್ಣೆ ಕ್ಯೂ ನಿಂತವರು ನಾವು. ಇಂದು ಏನೇ ಮಾತನಾಡಿದರೂ ಅದಕ್ಕೆ ನೂರು ತರಹ ಪರ-ವಿರೋಧ ಚರ್ಚೆಯಾಗುತ್ತದೆ. ಉಪ್ಪು ತಿಂದವರು ನೀರು ಕುಡಿಯಲಿ. ಬದುಕುವ ಹಠವಿದ್ದವರು ಹಿಮಾಲಯ ಏರುತ್ತಾರೆ. ಬದುಕನ್ನು ಹಗುರವಾಗಿ ಕಂಡವರು ಸ್ಮಶಾನ ಸೇರುತ್ತಾರೆ. ಅವರವರ ಹಣೆಬರಹ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.