
ಬೆಂಗಳೂರು: ಕನ್ನಡ ಚಿತ್ರರಂಗದ ಮತ್ತೊಬ್ಬ ಹಿರಿತ ಕಲಾವಿದ ಮೃತಪಟ್ಟಿದ್ದಾರೆ. ಹಿರಿಯ ನಟ ರಾಜಾರಾಂ ನಿಧನರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು.
‘ನಮ್ಮೂರ್ ಹುಡ್ಗ’ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ರಾಜರಾಂ ನಟಿಸಿದ್ದಾರೆ. ಸರ್ಕಾರಿ ಹುದ್ದೆಗೆ ಸೇರಿದ್ದರೂ, ರಂಗಭೂಮಿ ಮೇಲಿನ ಆಸಕ್ತಿಯಿಂದ ರಂಗತಂಡ ಕಟ್ಟಿದ್ದ ಅವರು ಹಲವಾರು ದಿಗ್ಗಜರ ನಿರ್ದೇಶನದ ಅಪಾರ ನಾಟಕಗಳಲ್ಲಿ ಅಭಿನಯಿಸಿದ್ದಾರೆ.
ನಟ ಸೃಜನ್ ಲೋಕೇಶ್ ಸಾಮಾಜಿ ಜಾಲತಾಣ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡುವ ಮೂಲಕ, ಮಾಹಿತಿ ಹಂಚಿಕೊಂಡಿದ್ದು, ರಾಜಾರಾಂ ಅಂಕಲ್ ನಿಧನದಿಂದ ದುಃಖವಾಗಿದೆ.ಅವರ ಜೊತೆ ಕಳೆದ ಸಮಯವನ್ನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ.
https://www.facebook.com/srujanlokesh/posts/314251950063653